ಅಪಘಾತ

ಒವರ್ ಸ್ಟೀಡ್: ಕೆಟಿಎಂ ಸವಾರರಿಬ್ಬರಿಗೆ ಗಾಯ

  • November 12, 2024
  • 0 Comments

ಕೆಟಿಎಂ ಬೈಕ್ ಸವಾರರಿಬ್ಬರು ಒವರ್ ಸ್ಪೀಡ್ ನಿಂದ ಬಂದು ಎರ್ಮಾಳು ನೇರಳ್ತಾಯ ಗುಡಿಯ ಬಳಿ ಬೈಕ್ಕೊಂದಕ್ಕೆ ಹಿಂದಿನಿಂದ ಡಿಕ್ಕಿಯಾಗಿ ಸುಮಾರು ನೂರೈವತ್ತು ಮೀಟರ್ ಎಸೆಯಲ್ಪಟ್ಟು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರು ಕೆಟಿಎಂ ಸವಾರರಾದ ಮಂಗಳೂರು ವಾಮಂಜೂರಿನ ಪೈಟಿಂಗ್ ವೃತ್ತಿ ನಡೆಸುತ್ತಿದ್ದ ಚೇತನ್ ಹಾಗೂ ಅನಿತ್, ಹಾಗೂ ಅಪಘಾತಕ್ಕೀಡಾದ ಮತ್ತೊಂದು ಬೈಕ್ ಸವಾರ ಉಚ್ಚಿಲ ನಿವಾಸಿ ದಾಮೋದರ ಪೂಜಾರಿ.ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬಂದ ಕೆಟಿಎಂ ಬೈಕ್ ಸವಾರರು ಎರ್ಮಾಳು ನೇರಳ್ತಾಯ ಗುಡಿ ಬಳಿ ಮುಂದಿನಿಂದ ಬಂದ […]

ಕ್ರೈಂ

ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ

  • November 12, 2024
  • 0 Comments

ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರು ಸಮೀಪದ ಇರಂದಾಡಿ ಬಸ್ ತಂಗುದಾಣದ ಹಿಂಭಾಗದಲ್ಲಿ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಆರು ದಿನಗಳ ಹಿಂದೆ ಈ ವ್ಯಕ್ತಿ ಮೃತ ಪಟ್ಟಿರ ಬಹುದೆಂಬುದಾಗಿ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಸುತ್ತ ಮುತ್ತಲ ಠಾಣೆಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಇದು ಆತ್ಮಹತ್ಯೆಯೊ…ಕೊಲೆಯೋ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರ ಬೀಳಲಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ

ಪಡುಬಿದ್ರಿ ಪೊಲೀಸ್ ಠಾಣಾ ಮುಂಭಾಗದಲ್ಲೇ ಮೆಸ್ಕಾಂ ಬಳ್ಳಿತೇರು

  • November 12, 2024
  • 0 Comments

ಪಡುಬಿದ್ರಿ ಪೊಲೀಸ್ ಠಾಣಾ ಮುಂಭಾಗ ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸಾಕ್ಷೀ ಎಂಬಂತೆ ಸರ್ಕಾರಿ ಶಾಲಾ ಕಾಲೇಜುಗೆ ಅಂಟಿ ಕೊಂಡಿರುವ ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿಗೆ ಬಳ್ಳಿ ಸುತ್ತಿಕೊಂಡು ತೇರಿನ ಮಾದರಿಯಲ್ಲಿ ಗೊಚರಿಸಿ ಅಪಾಯವನ್ನು ಕೈ ಬೀಸಿ ಕರೆಯುತ್ತಿದ್ದರೂ ಇಲಾಖೆ ಮೌನವಾಗಿದೆ. ಪಡುಬಿದ್ರಿಯ ಹೃದಯಭಾಗ ಮುಖ್ಯ ಮಾರುಕಟ್ಟೆ ರಸ್ತೆ, ಸರ್ಕಾರಿ ಪಬ್ಲಿಕ್ ಶಾಲಾ ಕಾಲೇಜು ಸಹಿತ ಸರ್ಕಾರಿ ಆಸ್ಪತ್ರೆ, ಅಂಚೆ ಕಛೇರಿ ಧಾರ್ಮಿಕ ಕ್ಷೇತ್ರಗಳನ್ನು ಸಂಧಿಸುವ ರಸ್ತೆಯಂಚಿನಲ್ಲೇ ಈ ಬಳ್ಳಿತೇರು ಬಹಳಷ್ಟು ದಿನಗಳಿಂದ ಅಪಾಯದ ಮುನ್ನುಸೂಚನೆ ನೀಡುತ್ತಿದೆ. ಹೃದಯ […]