ಅಪಘಾತ

ತೆಂಗಿನ ಮರದಿಂದ ಮನೆಯ ಗೇಟಿನ ಸರಳಿನ ಮೇಲೆ ಬಿದ್ದ ವ್ಯಕ್ತಿ

  • November 12, 2024
  • 0 Comments

ಕಾಯಿ ಕೀಳಳೆಂದು ತೆಂಗಿನ ಮರವೇರಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಮರದಿಂದ ಗೇಟಿನ ಸರಳಿಗೆ ಬಿದ್ದು ಕಾಲು ಸಿಲುಕಿಕೊಂಡ ಘಟನೆಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ಸಂಭವಿಸಿದೆ. ಮಣಿಪಾಲದ ಮಂಜೇಗೌಡ (36) ಗಾಯಗೊಂಡವರು.ಮಂಜೇಗೌಡ ಅವರು ಕಾಯಿ ಕೀಳುತ್ತಿದ್ದಾಗ ಮೇಲಿನಿಂದ ಸೀದಾ ಕೆಳಗಿದ್ದ ಕಾಂಪೌಂಡ್‌ನ ಗೇಟ್‌ನ ಸರಳಿಗೆ ಬಿದ್ದಿದ್ದಾರೆ. ಈ ವೇಳೆ ಅವರ ಕಾಲಿನೊಳಗೆ ಸರಳು ಸಿಲುಕಿಕೊಂಡಿತ್ತು. ಕೂಡಲೇ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಯಂತ್ರದ ಸಹಾಯದಿಂದ ಸರಳುಗಳನ್ನು ಬೇರ್ಪಡಿಸಿದ್ದಾರೆ. ಅನಂತರ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಹಾಯಕ […]