ಹಿಮ್ಮುಖವಾಗಿ ಚಲಿಸಿದ ಕಾರು, ತೆಕ್ಕಟ್ಟೆ ಬಳಿ ಭೀಕರ ಅಪಘಾತ: ಹಲವರಿಗೆ ಗಾಯ, ಇಬ್ಬರು ಗಂಭೀರ
ಹಿಮ್ಮುಖವಾಗಿ ಚಲಿಸುತ್ತಿದ್ದ ಇನ್ನೋವಾ ಕಾರಿಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಕುಂಭಾಶಿ ಸಮೀಪ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ಏಳು ಮಂದಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಕೊಲ್ಲೂರು ದೇವರ ದರ್ಶನ ಮುಗಿಸಿ ಕೇರಳ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ಚಾಲಕ ರಿವರ್ಸ್ ತೆಗೆಯುತ್ತಿದ್ದ. ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಮೀನಿನ ಲಾರಿ ಕಾರಿಗೆ ಡಿಕ್ಕಿ […]