ಹೆಜಮಾಡಿ ಶಾಂಭವಿ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವಪತ್ತೆ
ಗುರುತು ಪತ್ತೆಗಾಗಿ ಪೊಲೀಸ್ ಮನವಿ ಪಡುಬಿದ್ರಿ ವರದಿ ಹೆಜಮಾಡಿಯ ಬಂದರು ಪ್ರದೇಶದಲ್ಲಿ ಅಪರಿಚಿತ ಗಂಡಸಿನ ಶವವೊಂದು ಬುಧವಾರ ಸಂಜೆ ಪತ್ತೆಯಾಗಿದೆ.ಸುಮಾರು 70 ವಯಸ್ಸಿನ ವಯೊವೃದ್ಧರ ಶವವಾಗಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಹೊಳೆಯಲ್ಲಿ ಕಾಣಸಿಕ್ಕ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯಂತೆ ಈ ದಿನವೇ ಈ ವ್ಯಕ್ತಿ ನೀರಿಗೆ ಬಿದ್ದಿರುವ ಸಾಧ್ಯತೆ ಇದ್ದು, ಕಾರಣ ಶವ ಬಂಡೆ ಕಲ್ಲುಗಳ ಹೊಡೆತಕ್ಕೆ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ರೀತಿಯಲ್ಲಿ ಹಾಳಾಗಿಲ್ಲ, ಸ್ಥಳೀಯವಾಗಿ ಯಾರಿಗೂ ಈ ವ್ಯಕ್ತಿಯ ಮುಖ ಪರಿಚಯವಾಗಿಲ್ಲ, […]