ಉಡುಪಿ ವರದಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಟೋಲ್ ಶುಲ್ಕ ವಿನಾಯಿತಿ ಬಗ್ಗೆ ಟೋಲ್ ಹೋರಾಟಗಾರ ಸಭೆ ನಡೆಯಿತು. ಸಭೆಯಲ್ಲಿ ಟೋಲ್ ಗೇಟ್ ಗಳಲ್ಲಿನ ಬಹಳಷ್ಟು ಕುಂದು ಕೊರತೆಗಳ ಬಗ್ಗೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಗುಲಾಂ ಮೂಹಮ್ಮದ್, ಹೆಜಮಾಡಿ ಟೇಲ್ ಗೇಟ್ ನಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತ್ತಾಗಿದೆ, ಟೋಲ್ ಗೇಟ್ ಬಳಿಯ ನಾರಾಯಣ ಗುರು […]
ಉಡುಪಿ ಜಿಲ್ಲೆ ಹೆಜಮಾಡಿ ಸಮುದ್ರ ತೀರದಲ್ಲಿ ನಡೆದ ಘಟನೆ ನೀರುಪಾಲಾಗಿದ್ದ ಮೂವರ ಪೈಕಿ ಓರ್ವ ರಕ್ಷಣೆ ಚಿರಾಗ್ ಮತ್ತು ಅಕ್ಷಯ್ ಮೃತ ಯುವಕರು ಮೂವರನ್ನು ನೀರಿನಿಂದ ಮೇಲಕ್ಕೆತ್ತಿ ಮಂಗಳೂರಿನ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಓರ್ವ ಬದುಕುಳಿದಿದ್ದು ಇಬ್ಬರು ಯುವಕರ ಸಾವು ಮೀನುಗಾರಿಕೆ ನಡೆಸಲೆಂದು ಸಮುದ್ರ ತೀರಕ್ಕೆ ಹೋಗಿದ್ದ ಯುವಕರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ರವರು ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಯವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸ್ವಾಂತ್ವನ ತಿಳಿಸಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು , ಬಿ ಹಿರಿಯಣ್ಣ ಕೆ ಎಫ್ ಡಿ ಸಿ ಮಾಜಿ ಅಧ್ಯಕ್ಷರು , ವಿನೋದ್ ಕ್ರಾಸ್ಟೊ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ , ರೋಷನ್ ಬರೆಟೊ ಪಂಚಾಯತ್ ಸದಸ್ಯರು , ಅಭಿಜಿತ್ ಪೂಜಾರಿ ತಾಲೂಕು ಗ್ಯಾರಂಟಿ ಸಮಿತಿಯ […]
ಮಂಗಳೂರು ವರದಿ ಮಂಗಳೂರಿನ ಬಂಗ್ರ ಕುಳೂರು ನಲ್ಲಿ ದ.ಕ.ಜಿಲ್ಲಾ ಲೋಕಸಭೆ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ರವರ ಸಾರಥ್ಯದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ರವರು ಭಾಗವಹಿಸಿ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಗ್ರಾಮ ದೇಗುಲ ಜೀರ್ಣೋದ್ಧಾರಕ್ಕೆ ಶ್ರಮಿಸ ಬೇಕಾಗಿದೆ: ಪ್ರಕಾಶ್ ಶೆಟ್ಟಿ ಪಡುಬಿದ್ರಿ ವರದಿ ಪಡುಬಿದ್ರಿ ಬಂಟರ ಸಂಘ ಆಯೋಜಿಸಿದ ಅಂತರ್ ರಾಜ್ಯ ಮಟ್ಟದ ಕ್ರೀಡೋತ್ಸವ ಹೆಮ್ಮೆ ತಂದಿದೆ. ಮುಂದೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳಾಗಬೇಕಾಗಿದ್ದು ಗ್ರಾಮಸ್ಥರೆಲ್ಲಾರೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಮ್ಮ ಗ್ರಾಮ ದೇಗುಲ ಜೀರ್ಣೋದ್ಧಾರ ಕಾರ್ಯಕ್ಕೆ ಹೆಗಲು ಕೊಡಬೇಕಾಗಿದೆ ಎಂದು ಎಂಆರ್ ಜಿ ಗ್ರೂಪ್ ಉದ್ಯಮ ಸಂಸ್ಥೆಯ ಚೇರ್ಮೆನ್ ಹಾಗೂ ಆಡಳಿತ ನಿರ್ದೇಶಕ ಡಾ| ಪ್ರಕಾಶ ಕೆ. ಶೆಟ್ಟಿ ಹೇಳಿದ್ದಾರೆ. ಮೂಡುಬಿದಿರೆಯ […]
ಪಡುಬಿದ್ರಿ ವರದಿ ಹಳೆಯಂಗಡಿಯ ಟಾರ್ಪಟೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಯನ್ಸ್ ಟ್ರೋಫಿಗಾಗಿ ಎಂಟು ತಂಡಗಳ ನಡುವೆ ನಡೆದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದಲ್ಲಿ ಅಂತಿಮವಾಗಿ ದೀಪಕ್ ಶೆಟ್ಟಿ ನೇತೃತ್ವದ ಪಾದೆಬೆಟ್ಟು ವಿಷ್ಣುಮೂರ್ತಿ ತಂಡವನ್ನು ಸೋಲಿಸುವ ಮೂಲಕ ಪ್ರವೀಣ್ ಎರ್ಮಾಳು ನೇತ್ರತ್ವದ ಶ್ರೀ ಗುರು ಎರ್ಮಾಳು ತಂಡ ನಗದಿನೊಂದಿಗೆ “ಯನ್ಸ್” ಟ್ರೋಫಿ ಜಯಿಸಿದೆ. ವಿಷ್ಣುಮೂರ್ತಿ ಪಾದೆಬೆಟ್ಟು ತಂಡ ನಗದಿನೊಂದಿಗೆ ದ್ವಿತೀಯ ಪ್ರಶಸ್ತಿ ಪಡೆಯಿತು. ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಶ್ರೀಗುರು ತಂಡದ ನಿರುಪಮ್ ಪಡೆದರೆ, ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಪಾದೆಬೆಟ್ಟು […]
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಮೌಲ್ಯ ಬಟಾಬಯಲು.! ಪಡುಬಿದ್ರಿ ವರದಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಅಲ್ಲಲ್ಲಿ ಡಾಮಾರೀಕರಣ ನಡೆಯುತ್ತಿದ್ದು, ಹಾಕಿದ ಕೆಲಕಡೆ ಹಾಕಿದ ಕೆಲವೇ ಹೊತ್ತಲ್ಲಿ ಡಾಮಾರು ಕಿತ್ತು ಹೋಗುವ ಮೂಲಕ ಕಾಮಗಾರಿಯ ಮೌಲ್ಯ ಬಟಾ ಬಯಲಾದಂತ್ತಾಗಿದೆ. ಕಾಮಗಾರಿಯ ಹೆಸರಲ್ಲಿ ಹೆದ್ದಾರಿಯನ್ನು ಏಕಾಏಕಿ ಅಲ್ಲಲ್ಲಿ ಅವೈಜ್ಞಾನಿಕವಾಗಿ ಮುಚ್ವಿ, ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿರುವುದು ಒಂದು ಕಡೆಯಾದರೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹಿತ ತುರ್ತು ಕಾರ್ಯಕ್ರಮಗಳಿಗೆ ತೆರಳುವ ಸಾರ್ವಜನಿಕರ ಪಾಡು ಹೇಳ ತೀರದು. ಅದಕ್ಕಿಂತಲೂ ಅಧಿಕವಾಗಿ ಮೈಲುದ್ಧ ಬೆಳೆದ ಹೆದ್ದಾರಿ ಬ್ಲಾಕಿನಲ್ಲಿ […]
ಕಾಪು ಸೋನು ಸುಧೀರ್ ಮತ್ತು ಇತರರ ಮೇಲೆ ಪ್ರಕರಣ ದಾಖಲು ಉಡುಪಿ ವರದಿ ಕುತ್ಪಾಡಿ ಗ್ರಾಮದ ಉದ್ಯಾವರ ಶಿವಸಾಗರ್ ಹೋಟೆಲ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಕಾರೊಂದನ್ನು ಅಡ್ಡಗಟ್ಟಿದ ತಂಡವೊಂದು ಗೂಂಡಾಗಿರಿ ಪ್ರದರ್ಶಿಸಿ ಜೀವ ಬೆದರಿಕೆಯೊಡ್ಡಿದ್ದಲ್ಲದೆ, ಕಾರಿನ ಗಾಜು ಹೊಡೆದು ವಿಕೃತಿ ಮೆರೆದಿದ್ದಾರೆ ಎಂಬುದಾಗಿ ಉಡುಪಿ ನಗರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದ ಮೊಹಮ್ಮದ್ ಮುರಪಾಕ್ ಎಂಬವರು ಶಿವ ಸಾಗರ್ ಹೋಟೆಲ್ ಪಕ್ಕದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ ಕಾರಿನಲ್ಲಿ ಹೊರಡಲು ಸಿದ್ದವಾಗುತ್ತಿದಂತೆ ರಾತ್ರಿ […]