ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜಾ ಗೃಹ ಸಚಿವ ಡಾ. ಜಿ ಪರಮೇಶ್ವರ ರವರನ್ನು ಭೇಟಿ ಮಾಡಿ, 2025 ಜನವರಿ 26 ರಿಂದ 30 ರವರೆಗೆ ಅತ್ತೂರು ಕಾರ್ಕಳ ಸಂತ ಲೊರೆನ್ಸ್ ಬೆಸಿಲಿಕಾ ಚರ್ಚ್ ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ಭದ್ರತೆಗಾಗಿ ಪೋಲಿಸ್ ಮತ್ತು ಹೋಮ್ ಗಾರ್ಡ್ ಸಿಬ್ಬಂದಿ ನೀಡಬೇಕೆಂದು ಕೋರಿದರು.ಈ ಸಂಧರ್ಭದಲ್ಲಿ ಚರ್ಚ್ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವಾ ಅವರೊಂದಿಗಿದ್ದರು.
ಪಡುಬಿದ್ರಿ ಬೋರ್ಡ್ ಶಾಲಾ ಮೈದಾನ ವಿವಾದ ಪಡುಬಿದ್ರಿ ವರದಿ ಪಡುಬಿದ್ರಿಯ ಬೋರ್ಡ್ ಶಾಲಾ ಯಾವುದೇ ಕಾಮಗಾರಿಯಿಂದ ಆಟದ ಮೈದಾನಕ್ಕೆ ತೊಂದರೆಯಾದರೆ, ಯುವ ಜನತೆಯ ಪರವಾಗಿ ಮೈದಾನವನ್ನು ಆಟೋಟಕ್ಕೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ಧ ಎಂಬುದಾಗಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಗೌರವ ಅಧ್ಯಕ್ಷ ಶರತ್ ಶೆಟ್ಟಿ ಎಚ್ಚರಿಸಿದ್ದಾರೆ. ಡ್ರೈನೇಜ್ ನಿರ್ಮಾಣದ ಹೆಸರಲ್ಲಿ ಅದನ್ನು ಎತ್ತರಿಸಿ ಮೈದಾನವನ್ನು ಆಟೋಟಕ್ಕೆ ಬಳಕೆಯಾಗದ ರೀತಿಯಲ್ಲಿ ಮಾಡುವ ಹುನ್ನಾರ ನಡೆಯುತ್ತಿರುವುದು ಖೇಧಕರ ಸಂಗತಿ, ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ […]
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಪಂಚಾಯತ್ ಕಟ್ಟಡದ ಅಭಿವೃದ್ಧಿಯ ಬಗ್ಗೆ ಪಂಚಾಯತ್ ಸದಸ್ಯರೊಂದಿಗೆ ಚರ್ಚಿಸಿದರು.
ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಉಡುಪಿ ಜಿಲ್ಲೆಯ ಶಿರ್ವ ಹಿಂದೂ ಜೂನಿಯರ್ ಕಾಲೇಜುಗೆ ಭೇಟಿ ನೀಡಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದವರೊಂದಿಗೆ ಕಾಲೇಜಿನ ಮೈದಾನ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಚರ್ಚಿಸಿದರು.
ಪಡುಬಿದ್ರಿ ವರದಿ ನಲವತ್ತು ವರ್ಷ ಮೇಲ್ಪಟ್ಟ ಪ್ರಾಂಚೈಸಿ ಮಾದರಿ ಕ್ರಿಕೆಟ್ ಪಂದ್ಯಾಕೂಟ ಕ್ರಿಸ್ ಮಸ್ ಸೌಹಾರ್ದ ಟ್ರೋಫಿ-2024 ಪಂದ್ಯಾಕೂಟದಲ್ಲಿ ಅಂತಿಮವಾಗಿ ನಂದಿಕೂರು ಸ್ಟೈಕರ್ಸ್ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ. ಪಲಿಮಾರು ಪರಿಸರದ ಆರು ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ನಂದಿಕೂರು ಪ್ರತೀಕ್ ಕೋಟ್ಯಾನ್ ಹಾಗೂ ಸುಹಾಸ್ ಶೆಟ್ಟಿ ಮಾಲಿಕತ್ವದ ನಂದಿಕೂರು ಸ್ಟ್ರೈಕರ್ಸ್ ತಂಡ ನಗದು ಸಹಿತ ಕ್ರಿಸ್ಮಸ್ ಸೌಹಾರ್ದ ಟ್ರೋಫಿ ಪಡೆದರೆ, ಪೈನಲ್ ಪಂದ್ಯಾಟದಲ್ಲಿ ಉತ್ತಮ ಪೈಪೋಟಿ ನೀಡಿದ ಉತ್ತಮ ತಂಡ ಪಲಿಮಾರಿನ […]
ಕಾಪು ಹೊಸ ಮಾರಿಯಮ್ಮ ದೇಗುಲ ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಸಹಸ್ರಾರು ಭಕ್ತಾಧಿಗಳು ವಿವಿಧ ರೀತಿಯ ದೇಣಿಗೆಯನ್ನು ತಾಯಿಗೆ ಅರ್ಪಿಸಿದರೆ, ಪುಣೆ ಉದ್ಯಮಿ ಎರ್ಮಾಳು ಪುಚ್ಚೂಟ್ಟು ಬೀಡು ಬಾಲಚಂದ್ರ ಎಲ್. ಶೆಟ್ಟಿಯವರು ಕಂಬಳ ಕ್ಷೇತ್ರದಲ್ಲಿ ಗೆದ್ದ ಎಲ್ಲಾ ಚಿನ್ನದ ನಾಣ್ಯಗಳನ್ನು ತಾಯಿಯ ಸ್ವರ್ಣ ಗದ್ದುಗೆಗೆ ಅರ್ಪಿಸುವ ಮೂಲಕ ತಾಯಿ ಮಾರಿಯಮ್ಮನ ಕೃಪೆಗೆ ಪಾತ್ರರಾಗಿದ್ದಾರೆ. ಚಿನ್ನದೊಂದಿಗೆ ಅದಿನೈದು ಲಕ್ಷ ರೂಪಾಯಿಯ ಶಿಲಾ ಮೂರ್ತಿಯನ್ನು ಬಾಲಚಂದ್ರ ಎಲ್.ಶೆಟ್ಟಿ ದಂಪತಿಗಳು ಒಂದಾಗಿ ಸಪರ್ಮಣೆ ಮಾಡಿದ್ದಾರೆ.ಈ ಸಂದರ್ಭ ಮಾತನಾಡಿದ ದಾನಿ […]
ಗಣ್ಯರ ಸಂತಾಪ ಮೀನುಗಾರಿಕೆಗೆ ತೆರಳಿ ಕಡಲ ಅಬ್ಬರಕ್ಕೆ ಬಲಿಯಾದ ಯುವಕರಿಬ್ಬರ ಅಂತ್ಯ ಸಂಸ್ಕಾರ ಸ್ವಗ್ರಾಮ ಹೆಜಮಾಡಿಯಲ್ಲಿ ನಡೆಯಿತು. ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕ ಬಹುದಾದ ಪರಿಹಾರ ಮೊತ್ತವನ್ನು ಶೀಘ್ರವಾಗಿ ಕುಟುಂಬಕ್ಕೆ ತುಲುಪಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಸಹಿತ ತಹಶಿಲ್ದಾರರಲ್ಲಿ ಮಾತುಕತೆ ನಡೆಸಿರುವುದಾಗಿ ಶಾಸಕರು ತಿಳಿಸಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಬಾಗಿಯಾದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾಂಗ್ರೆಸ್ ಮುಖಂಡ ಗುಲಾಂ ಮೂಹಮ್ಮದ್ ಹೆಜಮಾಡಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಕುಟುಂಬಕ್ಕೆ ಸಾಂತ್ವನ ನೀಡಿದ್ದು, ಸಂತಾಪ ವ್ಯಕ್ತ […]