ಕರಾವಳಿ ಕ್ರೀಡೆ

ಪಡುಬಿದ್ರಿಯಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೂಟದ ಉದ್ಘಾಟನೆ

  • November 17, 2024
  • 0 Comments

ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ: ನವೀನ್ ಚಂದ್ರ ಜೆ. ಶೆಟ್ಟಿ ಎಲ್ಲಾ ಜಾತಿ ಮತ ಧರ್ಮಗಳನ್ನು ಮೀರಿ ನಡೆಯುವುದೇ ಕ್ರಿಕೆಟ್, ಇಲ್ಲಿ ನೀನು ಯಾವ ಜಾತಿ ಯಾವ ಧರ್ಮ ಎಂಬ ಕಟ್ಟು ಪಾಡುಗಳಿಲ್ಲ ಕೇವಲ ಆತನ ಇಲ್ಲವೇ ಆಕೆಯ ಪ್ರತಿಭೆಗೆ ತಕ್ಕ ಮನ್ನಣೆ, ಎಲ್ಲರೂ ಸೋದರತ್ವದಲ್ಲಿ ಬೆರೆಯಲು ಸಾಧ್ಯವಾಗುವುದು ಕೇವಲ ಕ್ರಿಕೆಟ್ ನಲ್ಲಿ ಮಾತ್ರ ಸಾಧ್ಯ ಎಂಬುದಾಗಿ ನವೀನ್ ಚಂದ್ರ ಜೆ.ಶೆಟ್ಟಿ ಹೇಳಿದ್ದಾರೆ. ಅವರು ಪಡುಬಿದ್ರಿಯ ಕಡಲ ಫಿಶ್ ಸಂಸ್ಥೆಯ ಆಶ್ರಯದಲ್ಲಿ ಪಡುಬಿದ್ರಿ ಬೋರ್ಡ್ ಶಾಲಾ […]

ರಾಜಕೀಯ ರಾಜ್ಯ

ರಾಜ್ಯದಲ್ಲಿರುವುದು ಮುಸಲ್ಮಾನರ ಸರಕಾರ – ಸುನಿಲ್ ಕುಮಾರ್ ಲೇವಡಿ

  • November 14, 2024
  • 0 Comments

ಸಿದ್ದರಾಮಯ್ಯ ಅವರಿಂದ ಮುಸಲ್ಮಾನರ ತುಷ್ಟೀಕರಣ ಇದೇ ಮೊದಲೇನಲ್ಲ .ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಒಬಿಸಿ ವರ್ಗಕ್ಕೆ ಈ ಸರ್ಕಾರದಲ್ಲಿ ನ್ಯಾಯ ಇಲ್ಲ. ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿದರು, ಈ ಬಾರಿ ವಕ್ಫ್ ಆಸ್ತಿಗೆ ಬೇಲಿ ಹಾಕಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಮುಂದುವರೆದು ಸರಕಾರಿ ಕಾಮಗಾರಿಯಲ್ಲೂ ಮುಸಲ್ಮಾನರಿಗೆ ಮೀಸಲಾತಿ ನೀಡಲು ಹೊರಟಿದ್ದಾರೆ. ಈ ಸರಕಾರ ಸರ್ವರ […]

ಕ್ರೈಂ

ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶ

  • November 14, 2024
  • 0 Comments

ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಲಕ್ಷಾಂತರ ರೂ. ಮೌಲ್ಯದ ಸುಮಾರು 260ಕ್ಕೂ ಅಧಿಕ ಮದ್ಯದ ಬಾಕ್ಸ್‌ಗಳು ಪತ್ತೆಯಾಗಿವೆ. ಅಬಕಾರಿ ಅಧಿಕಾರಿಗಳು ಅದನ್ನು ಜಪ್ತಿ ಮಾಡಿ ಕಾರ್ಕಳ ಅಬಕಾರಿ ಇಲಾಖೆಯಲ್ಲಿ ದಾಸ್ತಾನಿರಿಸಿದ್ದಾರೆ. ಇವೆಲ್ಲವೂ ಬ್ರ್ಯಾಂಡೆಡ್‌ ಮದ್ಯಗಳಾದ ಜಾನಿ ವಾಕರ್‌, ಬ್ಲಾಕ್‌ ಲೇಬಲ್‌, ಬ್ಲ್ಯಾಕ್‌ ಆಂಡ್‌ ವೈಟ್‌, ಮ್ಯಾನ್ಶನ್‌ ಹೌಸ್ (MH), ಮ್ಯಾಕ್‌ಡ್ವೆಲ್‌ (MC), ಓಡ್ಕ ಲೇಬಲ್‌ನ […]

ಕ್ರೀಡೆ

ಪಡುಬಿದ್ರಿಗೆ ಶ್ರೀಲಂಕ ಕ್ರಿಕೆಟ್ ತಂಡ

  • November 13, 2024
  • 0 Comments

ಪಡುಬಿದ್ರಿಯಲ್ಲಿ ಅಂತರಾಷ್ಟ್ರೀಯ ಮಟ್ಟದ “ಕಡಲ ಫಿಶ್ “ಟ್ರೋಫಿ ಕಡಲ್ ಫಿಶ್ ಕ್ರಿಕೆಟರ್ಸ ಪಡುಬಿದ್ರಿ ಇದರ ವತಿಯಿಂದ ಉಭಯ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ” ಕಡಲ್ ಫಿಶ್ ಟ್ರೋಫಿ -2024″ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟವು ನವೆಂಬರ್ 16 ,17 ಮತ್ತು 18 ರಂದು ಪಡುಬಿದ್ರಿ ಬೋರ್ಡ್ ಶಾಲಾ ಮೃೆದಾನದಲ್ಲಿ ನಡೆಯಲಿದೆ. ಈ ಪಂದ್ಯಕೂಟದಲ್ಲಿ ಪ್ರಥಮ ಬಾರಿಗೆ ಶ್ರೀಲಂಕಾ ಮತ್ತು ಇಂಡಿಯಾದ ಟೆನ್ನಿಸ್ ಬಾಲ್ ತಂಡಗಳು ಹಾಗು , ಮಧ್ಯಪ್ರದೇಶ , ಮಹಾರಾಷ್ಟ್ರ ಸೇರಿ ರಾಜ್ಯದ […]

ರಾಜಕೀಯ

ನಮ್ಮನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ: ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್

  • November 12, 2024
  • 0 Comments

ಅಬಕಾರಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.ಮಹಾರಾಷ್ಟ್ರ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಕರ್ನಾಟಕದ ಮದ್ಯ ಮಾರಾಟಗಾರರಿಂದ 700 ಕೋಟಿ ಲೂಟಿ ಹೊಡೆದಿದೆ ಎಂಬ ಆರೋಪದ ಕುರಿತು ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು,ಚುನಾವಣೆಗಾಗಿ ಸರ್ಕಾರಕ್ಕೆ ನಾವು ಯಾವುದೇ ಹಣ ಕೊಟ್ಟಿಲ್ಲ. ದಯವಿಟ್ಟು ಈ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ 25ನೇ ತಾರೀಕು ಪ್ರತಿಭಟನಾ ಸಭೆ […]

ಕ್ರೈಂ

ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ: ಎಸ್ಸೈ ಸಹಿತ ಇಬ್ಬರ ಅಮಾನತು

  • November 12, 2024
  • 0 Comments

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಎಸ್ಸೈ ಸೇರಿದಂತೆ ಇಬ್ಬರು ಪೊಲೀಸರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ಪೊಲೀಸರು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಚೇರ್ಕಾಡಿ ಗ್ರಾಮದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಬಿಜು ಮೋನು ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ […]

ಅಪಘಾತ

ಒವರ್ ಸ್ಟೀಡ್: ಕೆಟಿಎಂ ಸವಾರರಿಬ್ಬರಿಗೆ ಗಾಯ

  • November 12, 2024
  • 0 Comments

ಕೆಟಿಎಂ ಬೈಕ್ ಸವಾರರಿಬ್ಬರು ಒವರ್ ಸ್ಪೀಡ್ ನಿಂದ ಬಂದು ಎರ್ಮಾಳು ನೇರಳ್ತಾಯ ಗುಡಿಯ ಬಳಿ ಬೈಕ್ಕೊಂದಕ್ಕೆ ಹಿಂದಿನಿಂದ ಡಿಕ್ಕಿಯಾಗಿ ಸುಮಾರು ನೂರೈವತ್ತು ಮೀಟರ್ ಎಸೆಯಲ್ಪಟ್ಟು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರು ಕೆಟಿಎಂ ಸವಾರರಾದ ಮಂಗಳೂರು ವಾಮಂಜೂರಿನ ಪೈಟಿಂಗ್ ವೃತ್ತಿ ನಡೆಸುತ್ತಿದ್ದ ಚೇತನ್ ಹಾಗೂ ಅನಿತ್, ಹಾಗೂ ಅಪಘಾತಕ್ಕೀಡಾದ ಮತ್ತೊಂದು ಬೈಕ್ ಸವಾರ ಉಚ್ಚಿಲ ನಿವಾಸಿ ದಾಮೋದರ ಪೂಜಾರಿ.ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬಂದ ಕೆಟಿಎಂ ಬೈಕ್ ಸವಾರರು ಎರ್ಮಾಳು ನೇರಳ್ತಾಯ ಗುಡಿ ಬಳಿ ಮುಂದಿನಿಂದ ಬಂದ […]

ಕ್ರೈಂ

ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ

  • November 12, 2024
  • 0 Comments

ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರು ಸಮೀಪದ ಇರಂದಾಡಿ ಬಸ್ ತಂಗುದಾಣದ ಹಿಂಭಾಗದಲ್ಲಿ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಆರು ದಿನಗಳ ಹಿಂದೆ ಈ ವ್ಯಕ್ತಿ ಮೃತ ಪಟ್ಟಿರ ಬಹುದೆಂಬುದಾಗಿ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಸುತ್ತ ಮುತ್ತಲ ಠಾಣೆಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಇದು ಆತ್ಮಹತ್ಯೆಯೊ…ಕೊಲೆಯೋ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರ ಬೀಳಲಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ

ಪಡುಬಿದ್ರಿ ಪೊಲೀಸ್ ಠಾಣಾ ಮುಂಭಾಗದಲ್ಲೇ ಮೆಸ್ಕಾಂ ಬಳ್ಳಿತೇರು

  • November 12, 2024
  • 0 Comments

ಪಡುಬಿದ್ರಿ ಪೊಲೀಸ್ ಠಾಣಾ ಮುಂಭಾಗ ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸಾಕ್ಷೀ ಎಂಬಂತೆ ಸರ್ಕಾರಿ ಶಾಲಾ ಕಾಲೇಜುಗೆ ಅಂಟಿ ಕೊಂಡಿರುವ ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿಗೆ ಬಳ್ಳಿ ಸುತ್ತಿಕೊಂಡು ತೇರಿನ ಮಾದರಿಯಲ್ಲಿ ಗೊಚರಿಸಿ ಅಪಾಯವನ್ನು ಕೈ ಬೀಸಿ ಕರೆಯುತ್ತಿದ್ದರೂ ಇಲಾಖೆ ಮೌನವಾಗಿದೆ. ಪಡುಬಿದ್ರಿಯ ಹೃದಯಭಾಗ ಮುಖ್ಯ ಮಾರುಕಟ್ಟೆ ರಸ್ತೆ, ಸರ್ಕಾರಿ ಪಬ್ಲಿಕ್ ಶಾಲಾ ಕಾಲೇಜು ಸಹಿತ ಸರ್ಕಾರಿ ಆಸ್ಪತ್ರೆ, ಅಂಚೆ ಕಛೇರಿ ಧಾರ್ಮಿಕ ಕ್ಷೇತ್ರಗಳನ್ನು ಸಂಧಿಸುವ ರಸ್ತೆಯಂಚಿನಲ್ಲೇ ಈ ಬಳ್ಳಿತೇರು ಬಹಳಷ್ಟು ದಿನಗಳಿಂದ ಅಪಾಯದ ಮುನ್ನುಸೂಚನೆ ನೀಡುತ್ತಿದೆ. ಹೃದಯ […]

ಅಪಘಾತ

ಕಡಿತದ ಮತ್ತಿನಲ್ಲಿ ಇನೋವಾ ಚಾಲನೆ: ಕೇರಳದ ಇಬ್ಬರು ಯುವಕರು ವಶಕ್ಕೆ

  • November 12, 2024
  • 0 Comments

ಕಡಿತದ ನಶೆಯಲ್ಲಿ ಕೇರಳ ಮೂಲದ ಯುವಕರಿಬ್ಬರು ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತ ನಡೆಸಿ ಅಂತಿಮವಾಗಿ ಪಡುಬಿದ್ರಿ ಪೊಲೀಸರ ಅಥಿತಿಯಾಗಿದ್ದಾರೆ. ಕೇರಳ ಮೂಲದ ದೀರಜ್ ಹಾಗೂ ಗೌತಮ್ ಎಂಬ ಇಬ್ಬರು ಯುವಕರು ಉಡುಪಿಗೆ ಬಂದು ತಿರುಗಾಟ ನಡೆಸಿ ಕಂಠಪೂರ್ತಿ ಕುಡಿದು ಮರಳಿ ಕೇರಳಕ್ಕೆ ಹೋಗಲು ಮುಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾಂಗಾಳದಲ್ಲಿ ಕಾರೊಂದಕ್ಕೆ ಡಿಕ್ಕಿಯಾಗಿ ನಿಲ್ಲಿಸದೆ ಮುಂದೋಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಹೆಜಮಾಡಿ ಟೋಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. ಅಲ್ಲಿಗೆ ಬಂದ ಪೊಲೀಸರು ಟೋಲ್ […]