ರಾಜಕೀಯ

ಎನ್ ಕೌಂಟರ್ ನಕಲಿಯಲ್ಲ ಅಸಲಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

  • November 30, 2024
  • 0 Comments

ಉಡುಪಿ ವರದಿ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ. ಎನ್‌ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ. ಉಡುಪಿಯ ಗೃಹ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಚಿವರು, ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆಯ ಅವಶ್ಯಕತೆ ಇಲ್ಲ. ಅಗತ್ಯವಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಕಾನೂನು ಪ್ರಕಾರ ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ […]

ಕರಾವಳಿ

ಗೊಂದಲದ ಗೂಡಾದ ಫಲಿಮಾರು ಗ್ರಾಮಸಭೆ!

  • November 30, 2024
  • 0 Comments

ಬೇಕು ಬೇಡಗಳ ಮಧ್ಯೆ ನಡೆದ ಗ್ರಾಮ ಸಭೆಯಲ್ಲಿ ಕೆಲ ಅಧಿಕಾರಿಗಳು ಗೈರು ಪಲಿಮಾರು ವರದಿ ಬೆರಳೆಣಿಕೆ ಗ್ರಾಮಸ್ಥರಿದ್ದ ವೇಳೆ ಗ್ರಾಮಸಭೆ ಆರಂಭಿಸಲಾಯಿತಾದರೂ ಕೊರಂ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದಾಗ ಗೊಂದಲ ಮಯ ವಾತಾವರಣ ಸೃಷ್ಟಿಯಾಯಿತಾದರೂ ಅಂತಿಮವಾಗಿ ಒಂದಿಷ್ಟು ಗ್ರಾಮಸ್ಥರು ಸಭೆಗೆ ಆಗಮಿಸಿದ್ದರಿಂದ ಸಭೆ ಮುಂದುವರಿಸಲಾಯಿತು. ನಂದಿಕೂರು ದೇವರಕಾಡು ಪ್ರದೇಶದಲ್ಲಿ ನಿರ್ಮಾಣವಾಗಿರುವ ಎಂ11ಕಂಪನಿಯಿಂದ ಹೊರ ಸೂಸುವ ದುರ್ನಾತ ಪರಿಸರವೆಲ್ಲಾ ಗಾಳಿಯಲ್ಲಿ ಪಸರಿಸುತ್ತಿದ್ದು, ಈ ಬಗ್ಗೆ ಉತ್ತರಿಸ ಬೇಕಾಗಿದ್ದ ಪರಿಸರ ಇಲಾಖಾ ಅಧಿಕಾರಿಗಳ ಗೈರು […]

ಕ್ರೈಂ

ಅಕ್ರಮ ಮರಳುಗಾರಿಕೆಗೆ ಸಹಕಾರ- ಕಾಪು ಎಸ್ಸೈ ಖಾದರ್ ಅಮಾನತು

  • November 30, 2024
  • 0 Comments

ಕಾಪು ವರದಿ ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಅಮಾನತುಗೊಂಡಿದ್ದಾರೆ.ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು‌ ದಾಖಲಾಗಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿಜಿಲ್ಲಾ ಎಸ್ಪಿ ಡಾ.ಅರುಣ್ ಕುಮಾರ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದರು.ಆದರೆ ಅಕ್ರಮ ಮರಳುಗಾರಿಕೆ ನಡೆಸಲು ಕಾಪು ಠಾಣಾಧಿಕಾರಿಯವರು ಸಹಕರಿಸಿದ್ದಾರೆ ಎಂಬುದನ್ನು ತಿಳಿಸುವ ಆಡಿಯೋವೊಂದು ಎಸ್ಪಿ ಡಾ.ಅರುಣ್ ಅವರಿಗೆ ಲಭಿಸಿದ್ದು, ಈ ಆಡಿಯೋವನ್ನು ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲ್ಲುಗುಜ್ಜಿಯವರ ಮೂಲಕ ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿಯವರ ವರದಿಯಲ್ಲಿ ಕಾಪು […]

ರಾಜಕೀಯ

ಅಪಘಾತಕ್ಕೀಢಾದ ಕುಟುಂಬ ಸದಸ್ಯರಿಗೆ ಸರ್ಕಾರದ ಅನುದಾನ ವಿತರಣೆ

  • November 29, 2024
  • 0 Comments

ಮಂಗಳೂರು ವರದಿ ಇತ್ತೀಚಿಗೆ ಮೀನುಗಾರಿಕೆ ಮಾಡುತ್ತಿರುವ ಸಂದರ್ಭದಲ್ಲಿ ಅಪಘಾತಕ್ಕಿಢಾಗಿ ಸಾವನ್ನಪ್ಪಿದ ಅಸ್ಫಾನ್ ರವರಿಗೆ ಸರ್ಕಾರದಿಂದ ರೂ. 8.00 ಲಕ್ಷ ರೂಪಾಯಿ ಧನಸಹಾಯವನ್ನು ಮೃತರ ಮನೆಗೆ ವಿಧಾನ ಪರಿಷತ್ತಿನ ಶಾಸಕ ಐವನ್ ಡಿ ಸೋಜಾ ತೆರಳಿ ಚೆಕ್ ನ್ನು ವಿತರಿಸಿದರು. ಈಸಂದರ್ಭದಲ್ಲಿಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ದಿಲೀಪ್ ಕುಮಾರ್, ಸಿದ್ದಯ್ಯ.ಡಿ, ಬೆಂಗ್ರೆ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ಅಶ್ರಫ್ ಬೆಂಗ್ರೆ, ಬೆಂಗ್ರೆ ಯುವ ಕಾಂಗ್ರೆಸ್ ನ ಸಫ್ವಾನ್, ಬೆಂಗ್ರೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಲೀಂ, ರಫೀಕ್, ಶಿಯಾಬ್ ಮುಂತಾದವರು ಅವರೊಂದಿಗಿದ್ದರು.

Uncategorized

ಜಾತಿ ಮತ ಭೇದ ಮರೆತು ಆಚರಿಸುವ ಹಬ್ಬ ಹೆಜಮಾಡಿ ಜುಮ್ಮಾ ಮಸೀದಿಯ ಉರೂಸ್ ಸಮಾರಂಭ

  • November 29, 2024
  • 0 Comments

ಪಡುಬಿದ್ರಿ ವರದಿ ಕನ್ನಂಗಾರಿನ ಇತಿಹಾಸ ಪ್ರಸಿದ್ದ ಜುಮ್ಮಾ ಮಸೀದಿಯ ವಾರ್ಷಿಕ ಉರೂಸ್ ಸಮಾರಂಭ ಇದೇ ಬರುವ ಎಪ್ರಿಲ್ ಹನ್ನೊಂದರಿಂದ ಹತ್ತೊಂಭತ್ತರ ವರಗೆ ಉದ್ಯಮಿ ಗುಲಾಂ ಹಾಜಿ ಮೊಹಮ್ಮದ್ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂಬುದಾಗಿ ಮಸೀಯ ಧರ್ಮಗುರು ಅಶ್ರಫ್ ಸಖಾಫಿ ಹೇಳಿದ್ದಾರೆ. ಅವರು ಮಸೀದಿಯಲ್ಲಿ ಉರೂಸಿನ ಕರಪತ್ರ ಬಿಡುಗಡೆ ಗೊಳಿಸಿ ಮಾತನಾಡಿದರು. ಎಲ್ಲಾ ಜಾತಿ ಧರ್ಮಗಳ ನಂಬಿಕೆಯ ಹಾಗೂ ಭಕ್ತಿಯ ಕ್ಷೇತ್ರ ಈ ಕನ್ನಂಗಾರು ಜುಮ್ಮಾ ಮಸೀದಿ, ಜಾತ ಧರ್ಮ ಮತ ಮರೆತು ಉರೂಸ್ ಸಂದರ್ಭ ಎಲ್ಲರೂ ಈ […]

ರಾಜಕೀಯ

ಐವನ್ ಡಿಸೋಜರಿಂದ ನಾಲ್ಯ ಪದವು ಸರ್ಕಾರಿ ಪ್ರೌಢಶಾಲೆಗೆ ಭೇಟಿ

  • November 29, 2024
  • 0 Comments

ಮಂಗಳೂರು ವರದಿ ವಿಧಾನ ಪರಿಷತ್ ಶಾಸಕ ಐವಾನ್ ಡಿಸೋಜ ಶಕ್ತಿನಗರದ ನಾಲ್ಯಪದವುವಿನ ಸರಕಾರಿ ಪ್ರೌಢಶಾಲೆಗೆ ಬೇಟಿ ನೀಡಿ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಹಾಗೂ ಶಿಕ್ಷಕರೊಂದಿಗೆ ಶಾಲೆಯ ಸಮಸ್ಯೆ ಬಗ್ಗೆ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭ ಅವರೊಂದಿಗೆ ದ.ಕ.ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕು ಘಟಕದ ಅಧ್ಯಕ್ಷ ನ್ಯಾಯವಾದಿ ಮನೋರಾಜ್ ರಾಜೀವ್, ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಶವಂತ್ ಪ್ರಭು ಶಕ್ತಿನಗರ, ವಾರ್ಡ್ ಅಧ್ಯಕ್ಷ ದಯಾನಂದ ಬೂತ್ ಅಧ್ಯಕ್ಷ ಪ್ರಸಾದ್, ರಿತೇಶ್ […]

ಉಡುಪಿ

ಕನ್ನಂಗಾರ್ ಉರೂಸ್ ಸಮಿತಿ:ಅಧ್ಯಕ್ಷರಾಗಿ ಹಾಜಿ ಗುಲಾಂ ಮುಹಮ್ಮದ್ ಆಯ್ಕೆ

  • November 29, 2024
  • 0 Comments

ಪಡುಬಿದ್ರಿ ವರದಿ ಕನ್ನಂಗಾರ್ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿಯೂ ಸಮಾಜ ಸೇವಕರೂ ಆದ ಹಾಜಿ ಗುಲಾಂ ಮುಹಮ್ಮದ್ ಹೆಜಮಾಡಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಹನೀಫ್ ಹಾಜಿ, ಇಬ್ರಾಹಿಂ ಸನಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಕೀಬ್, ಕಾರ್ಯದರ್ಶಿಗಳಾಗಿ ಸುಲೈಮಾನ್ ನೂರಿ, ಹಮೀದ್ ಚಾಯ್ಸ್, ಕೋಶಾಧಿಕಾರಿಯಾಗಿ ಕಬೀರ್ ಹಾಜಿ ಹಾಗೂ 25 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಸಾಮಾಜಿಕ

ಅಯ್ಯೋದ್ಯೆ ಕರಸೇವೆಯಲ್ಲಿ ಬಾಗಿಯಾದ ಮಾಧವ ಸುವರ್ಣ ಇನ್ನಿಲ್ಲ

  • November 27, 2024
  • 0 Comments

ಎರ್ಮಾಳು ವರದಿ ಪಡುಬಿದ್ರಿ ರೋಟರಿ ಸಂಸ್ಥೆಯಲ್ಲಿ ಸ್ಥಾಪಕ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ ಇವರು, ಬಿಜೆಪಿ ಮಾಜಿ ಕ್ಷೇತ್ರಾದ್ಯಕ್ಷರು, ಆರ್.ಎಸ್.ಎಸ್. ನ ಹಿರಿಯರು ಮತ್ತು ಆಯೋದ್ಯ ರಾಮ ಮಂದಿರದ ಕರಸೇವೆಯಲ್ಲಿ ಭಾಗವಹಿಸಿದ, ಬಿಜೆಪಿಯ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ, ಪಕ್ಷ ನಿಷ್ಠೆ ಹಿರಿಯ ಕಾರ್ಯಕರ್ತರು ಆದ ಮಾಧವ ಸುವರ್ಣರವರು ಇಂದು ನಿಧನರಾಗಿದ್ದು , ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 10 ಗಂಟೆಗೆ ತೆಂಕ ಎರ್ಮಾಳು ಸ್ವಗೃಹದಲ್ಲಿ ನಡೆಯಲಿದೆ ಕುಟುಂಬ ವಲಯ […]

ಸಾಮಾಜಿಕ

ಬಡ ಮಹಿಳೆಯ ಕುಟುಂಬಕ್ಕೆ ಆಧಾರವಾದ ಮಂಜಣ್ಣ ಸೇವಾ ಬ್ರಿಗ್ರೇಡ್

  • November 27, 2024
  • 0 Comments

ಮಂಗಳೂರು ವರದಿ 200ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ 60ಲಕ್ಷಕ್ಕೂ ಅಧಿಕ ಮೊತ್ತದ ಸೇವಾ ಯೋಜನೆಯನ್ನು ಮಾಡಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ವತಿಯಿಂದ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು ಪೂರ್ವಬಾವಿಯಾಗಿ ಭೂಮಿ ಪೂಜೆ ನಡೆಯಿತು. ಮಂಗಳೂರಿನ ತೀರ ಬಡ ಕುಟುಂಬದ ಪಡೀಲ್ ನಿವಾಸಿ ಸುನಿತಾ ಎಂಬವರಿಗೆ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮನೆ ಕೆಲಸ ಮಾಡುತ್ತಾ ಮಾನಸಿಕ ಸ್ಥಿತಿ ಸರಿಯಿಲ್ಲದ ಅಣ್ಣನ ಜೊತೆ ಬದುಕು ಕಳೆಯುತ್ತಿರುವ ಸುನಿತಾ ಅವರ ಪರಿಸ್ಥಿತಿ ತೀರ ಸಂಕಷ್ಡದಲ್ಲಿದೆ. ಇವರ […]