ಕ್ರೈಂ

ಪ್ರವೀಣ್ ನೆಟ್ಟಾರು ಕೊಲೆ ಹಿನ್ನಲೆ ಎಐಎನ್ ದಾಳಿ

  • December 5, 2024
  • 0 Comments

ಮಡಿಕೇರಿ ವರದಿ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಕೊಡುಗು ಸೇರಿದಂತೆ ರಾಜ್ಯದ ಸುಮಾರು ಅದಿನಾರು ಕಡೆಗಳಿಗೆ ದಾಳಿ ನಡೆಸಿದೆ. ಗುರುವಾರ ಮುಂಜಾನೆ ಸೋಮವಾರ ಪೇಟೆ ತಾಲೂಕಿನಲ್ಲಿಎರಡು ಮನೆ ಹಾಗೂ ಸುಂಟಿಕೊಪ್ಪದ ಒಂದು ಮನೆಗೆ ದಾಳಿ ನಡೆಸಿ ಪರಿಶೀಲಿಸಿದ ಅಧಿಕಾರಿಗಳ ತಂಡ ತೀವ್ರ ಪರಿಶೀಲನೆ ನಡೆಸಿ ಮನೆಮಂದಿಯಿಂದ ಮಾಹಿತಿ ಕಲೆ ಹಾಕಿ ಮರಳಿದೆ.

ಕ್ರೈಂ

ಕರ್ತವ್ಯಲೋಪ ದ.ಕ. ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಮಾನತು

  • December 5, 2024
  • 0 Comments

ಮಂಗಳೂರು ವರದಿ ಕರ್ತವ್ಯ ಲೋಪವೆಸಗಿದ ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಮುಂದಿನ ಆದೇಶ ಬರುವ ತನಕ ಅಮಾನತುಗೊಳಿಸಿ ಡಿ.4ರಂದು ಆದೇಶ ಹೊರಡಿಸಲಾಗಿದೆ. ಕೆಲ ದಿನಗಳ ಹಿಂದೆ ಪೊಲೀಸರು ಕಾರಾಗೃಹಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಆ ಬಳಿಕ ಬಿ.ಟಿ. ಓಬಳೇಶಪ್ಪ ಅವರನ್ನು ಅಮಾನತುಗೊಳಿಸಲಾಗಿತ್ತು. ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅಧೀಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ […]

ಕ್ರೈಂ

ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ

  • December 4, 2024
  • 0 Comments

ಮಂಗಳೂರು ವರದಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದ್ದು ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿ ದೂರು ದಾಖಲಿಸಿದ್ದಾರೆ. ನವೆಂಬರ್ 30 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ಬಾಂಬ್ ಬೆದರಿಕೆ ಬಂದಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ಮಾದರಿಯಲ್ಲಿ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಬಂದಿತ್ತು. ಈಗ ಬಂದಿರುವ ಇ-ಮೇಲ್ ಮೂಲಕ ಕಳುಹಿಸಲಾದ ಸಂದೇಶದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿದೆ. ಬೆಳಗ್ಗೆ […]

ಸಾಮಾಜಿಕ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಜಾಥಾ

  • December 4, 2024
  • 0 Comments

ಉಡುಪಿ ವರದಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇಸ್ಕಾನ್‌ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದೂ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ಇಂದು ಉಡುಪಿಯಲ್ಲಿ ಬೃಹತ್‌ ಪ್ರತಿಭಟನಾ ಜಾಥಾ ನಡೆಯಿತು.ಉಡುಪಿ ಜೋಡುಕಟ್ಟೆಯಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಅಲ್ಲಿಂದ ಆರಂಭಗೊಂಡ ಜಾಥವು ಸರ್ವಿಸ್‌, ಸಿಟಿ ಬಸ್‌ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ಸಾಗಿಬಂದು ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ಸಾವಿರಾರು ಹಿಂದೂ‌ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನಕಾರರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ […]

ರಾಜಕೀಯ

  • December 4, 2024
  • 0 Comments

ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್.ಆರ್ ರವರು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರನ್ನು ಬೇಟಿ ಮಾಡಿದರು.

ರಾಜಕೀಯ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಹಾಜಿ ಅಬುಬಕ್ಕರ್ ಐಡಿಯಲ್

  • December 4, 2024
  • 0 Comments

ಮಂಗಳೂರು ವರದಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಹಾಜಿ ಅಬುಬಕ್ಕರ್ ಐಡಿಯಲ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಇಬ್ರಾಹಿಂ ಶಾಹೀರ್ ಅಬ್ಬಾಸ್ ರವರ ನೇಮಕಾತಿ ಆದೇಶವನ್ನು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ ಕೆ ರವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಆಲ್ವಿನ್ ಪ್ರಕಾಶ್ , ಕೋಶಾಧಿಕಾರಿ ಮೊಹಮ್ಮದ್ ಬಪ್ಪಳಿಗೆ, ಇಬ್ರಾಹಿಂ ಯು.ಪಿ, ಸಬಿತಾ […]

Uncategorized

ಪ್ರಧಾನಿಯವರು ಮೌನ ಮುರಿದು ಬಾಂಗ್ಲಾದಲ್ಲಿ ಹಿಂದುಗಳಿಗೆ ರಕ್ಷಣೆ ನೀಡಿ: ಐವನ್

  • December 4, 2024
  • 0 Comments

ಮಂಗಳೂರು ವರದಿ ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಆಗುತ್ತಿರುವ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು, ಮತ್ತು ಅವರಿಗೆ ರಕ್ಷಣೆ ನೀಡ ಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದಾಳಿಯಾಗುತ್ತಿರುವ ಬಗ್ಗೆ ನಿರಂತರ ವರದಿಯಾಗುತ್ತಿದ್ದು ಇದು ಖಂಡನೀಯ, ಅಲ್ಲಿನ ಸರ್ಕಾರ ಅಲ್ಪಸಂಖ್ಯಾತ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ನಮ್ಮ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರು ಬಾಂಗ್ಲಾ ದೇಶದ ಸರ್ಕಾರದೊಂದಿಗೆ […]

ರಾಜಕೀಯ

ಬಾರೀ ಮಳೆಗೆ ಅಪಾಯದಂಚಿನಲ್ಲಿ ಮನೆ, ತಕ್ಷಣ ದುರಸ್ಥಿಗೆ ಐವನ್ ಸೂಚನೆ

  • December 4, 2024
  • 0 Comments

ಮಂಗಳೂರು ವರದಿ ಸುರಿದ ಬಾರೀ ಮಳೆಗೆ ಮನೆಯ ಅಂಗಣ ಕುಸಿದು ಮನೆ ಅಪಾಯದಂಚಿನಲ್ಲಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಐವನ್ ಡಿಸೋಜ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಬಾರೀ ಮಳೆಗೆ ಬಳ್ಳಾಲ್ ಬಾಗ್ ಉಮೇಶ್ ಎಂಬವರ ಮನೆಯ ಪಕ್ಕದ ನೀರು ಹರಿದು ಹೋಗುತ್ತಿದ್ದ ತೊರೆಯೊಂದು ತುಂಬಿ ಹರಿದ ಪರಿಣಾಮ ಮನೆಯ ಅಂಗಣ ಕುಸಿದಿದ್ದು, ಮನೆ ಅಪಾಯದಂಚಿನಲ್ಲಿವ ವಿಚಾರ ತಿಳಿದ ಶಾಸಕ ಐವನ್ ಡಿಸೋಜ ಉಮೇಶ್ ರವರ ಮನೆಗೆ ತೆರಳಿ […]

ಸಾಮಾಜಿಕ

ಡಿಸೆಂಬರ್23ಕ್ಕೆ ಕ್ರಿಸ್ಮಸ್ ಆಚರಣೆ

  • December 4, 2024
  • 0 Comments

ಶಾಸಕ ಐವನ್ ಡಿಸೋಜ ಸಾರಥ್ಯ ಮಂಗಳೂರು ವರದಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತ್ರತ್ವದಲ್ಲಿ ಕಳೆದ ಒಂಭತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಕ್ರಿಸ್ಮಸ್ ಆಚರಣೆ ಈ ಬಾರಿ ದಶಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದ್ದು ಅದ್ಧೂರಿಯಾಗಿ ನಡೆಸಲು ಮುಂದಾಗಿದೆ. ಡಿ.23ರ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ತೊಕ್ಕೊಟ್ಟು ಸೀ ಬ್ಯಾಂವ್ಯಾಟ್ ಹಾಲ್ ಅದಮ್ ಕುದ್ರು, ನೇತ್ರಾವತಿ ಸೇತುವೆ ಸಮೀಪ ಇಲ್ಲಿ ನಡೆಯಲಿದೆ. ಸರ್ವಧರ್ಮಗಳ ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಆಚರಿಸುವ ಮೂಲಕ ಮೆಚ್ಚುಗೆ ಗಳಿಸಿದ ಐವನ್ ಡಿಸೋಜ ಕಳೆದ ಹಿಂದುಗಳ […]

ಸಾಮಾಜಿಕ

ಮುದರಂಗಡಿ ಸಂತ ಫ್ರಾನ್ಸಿಸ್ ಝೆವಿಯರ್ ಚರ್ಚ್ ನವೀಕರಿಸಿದ ಚರ್ಚ್ ಕಟ್ಟಡ ಉದ್ಘಾಟನೆ

  • December 3, 2024
  • 0 Comments

ಮಂಗಳೂರು ವರದಿ ವಿಧಾನ ಪರಿಷತ್ ಶಾಸಕ ಐವಾನ್ ಡಿಸೋಜ ರವರು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ರವರೊಂದಿಗೆ ಉಡುಪಿ ಜಿಲ್ಲೆ ಮುದರಂಗಡಿಯ ಸಂತ ಫ್ರಾನ್ಸಿಸ್ ಝೆವಿಯರ್ ಚರ್ಚ್ ಇದರ ನವೀಕರಿಸಿದ ಚರ್ಚ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮೆಚ್ಚುಗೆಯ ಮಾತನಾಡಿದರು.ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.