ವಿದೇಶ

ಓಮನ್ ಬಿಲ್ಲವಾಸ್ 2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ

ಓಮನ್ ಬಿಲ್ಲವಾಸ್ ಕೂಟದ 2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭವನ್ನು ಜನವರಿ 10 ರಂದು ಮಸ್ಕತ್ ನಗರದ ಅಝೈಬ ಪ್ರದೇಶದಲ್ಲಿರುವ “ಅಝೈಬ ಗಾರ್ಡನ್, ಮುಲ್ಟಿಪರ್ಪೋಸ್ ಹಾಲ್‌” ನಲ್ಲಿ ನಡೆಯಿತು.

2025-2026 ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಓಮನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರಾಗಿರುವ ಉಮೇಶ್ ಬಂಟ್ವಾಳ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಹರೀಶ್ ಸುವರ್ಣ ಹಾಗೂ ಪ್ರಫುಲ್ಲ ಶಂಕರ ಪೂಜಾರಿಯವರು ಪುನರಾಯ್ಕೆಯಾದರು.

ಕೂಟದ ಸಂಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳಾದ ಎಸ್. ಕೆ ಪೂಜಾರಿ, ಡಾll. ಸಿ.ಕೆ. ಅಂಚನ್ ಹಾಗೂ ನಿರ್ಗಮನ ಅಧ್ಯಕ್ಷ ಸುಜಿತ್ ಅಂಚನ್ ಉಪಸ್ಥಿತರಿದ್ದು, ನೂತನ ಸದಸ್ಯರಿಗೆ ಹಾಗೂ ಸಮಸ್ತ ಓಮನ್ ಬಿಲ್ಲವರಿಗೆ ಭರವಸೆಯ ಮಾತುಗಳಿಂದ ಮಾರ್ಗದರ್ಶನವನ್ನು ನೀಡಿದರು.

ಸಂಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ಅಶೋಕ್ ಸುವರ್ಣ ಹೊಸ ಸಮಿತಿಗೆ
ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಮಹಿಳಾ ಮುಖಿಯಾಗಿ ದೀಪಿಕಾ ಪ್ರಸಾದ್ ಮಾತನಾಡಿ ಮಹಿಳೆಯರು ಸಂಪೂರ್ಣವಾಗಿ ಕೂಟದ ಮೂಲಕ ತಮ್ಮ ಪ್ರತಿಭೆ ಹಾಗೂ ಮನೋಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕೆಂಬ ಹಂಬಲ ವ್ಯಕ್ತಪಡಿಸಿದರು.

ಅಧ್ಯಕ್ಷ ಉಮೇಶ್ ಬಂಟ್ವಾಳ್ ತಮ್ಮ ಮಾತಿನ ಸರದಿಯಲ್ಲಿ, ಸ್ಥಾಪಕ ಸದಸ್ಯರನ್ನು ಸ್ಮರಿಸಿದರು. ದಿವಂಗತ ಪೀತಾಂಬರ ಅಲ್ಕೆ, ಮತ್ತು ಅರುಣ್ ಸನಿಲ್ ಹಾಗೂ ಒಮಾನ್ ಬಿಲ್ಲವಾಸ್ ನ ಆರಂಭದಿಂದಲೂ ಸೇವೆ ಮಾಡಿರುವ ಎಲ್ಲಾ ಮಾಜಿ ಸಮಿತಿಯ ಸದಸ್ಯರಿಗೆ ತಮ್ಮ ಅಮೂಲ್ಯವಾದ ಸಮುದಾಯ ಸೇವೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕಳೆದ ಎರಡು ವರ್ಷಗಳಲ್ಲಿ ನಡೆದಿರುವ ನಿರ್ಗಮನ ಸಮಿತಿಯ ಅದ್ಭುತ ಕೊಡುಗೆಗಾಗಿ ಸಮಿತಿಯನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಎಲ್ಲಾ ಸದಸ್ಯರ ನಿರಂತರ ಬೆಂಬಲವನ್ನು ಶ್ಲಾಘಿಸಿದರು.

ಶ್ರೀನಿವಾಸ್ ಬರ್ಕ ಕಾರ್ಯಕ್ರಮ ನಿರ್ವಾಹಿಸಿದರು, ಉಪಾಧ್ಯಕ್ಷ ಹರೀಶ್ ಸುವರ್ಣ ಧನ್ಯವಾದವಿತ್ತರು.

Leave a comment

Your email address will not be published. Required fields are marked *

You may also like

ವಿದೇಶ

ಜೋಗ ಜಲಪಾತ ವೀಕ್ಷಣೆಗೆ ಮೂರು ತಿಂಗಳು ನಿರ್ಬಂಧ!

  • December 17, 2024
Share this… Whatsapp Facebook Twitter ಕಾಮಗಾರಿ ಹಿನ್ನೆಲೆ ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಜನವರಿ 01 ರಿಂದ ಮಾರ್ಚ್ 15ರ ವರೆಗೆ 3 ತಿಂಗಳುಗಳ ಕಾಲ