ಹೇಳೋರಿಗೆ ಮಾಹಿತಿ ನೀಡಲಾಗಿದೆ ನಾನು ರಾಜಕೀಯ ಮಾಡಿಲ್ಲ: ಗುರ್ಮೆ
ಎಲ್ಲೂರು ದೇವಳದ ಕೆರೆ ಉದ್ಘಾಟನೆಗೆ ಬಹುತೇಕ ಪ್ರಮುಖರಿಗೆ ಕರೆ ನೀಡಲಾಗಿದೆ, ಕೆಲವರು ಬಂದಿದ್ದಾರೆ ಕೆಲವರು ಬಂದಿಲ್ಲ ಅದುಬಿಟ್ಟು ನಾನು ಯಾವುದೇ ರೀತಿಯ ರಾಜಕೀಯ ಈ ವಿಚಾರದಲ್ಲಿ ಮಾಡಿಲ್ಲ ಎಂಬುದಾಗಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ಪಷ್ಟ ಪಡಿಸಿದ್ದಾರೆ.
ಉದ್ಘಾಟನೆಗೆ ದಿನ ನಿಗದಿ ಪಡಿಸಿ,ಹೇಳೊರಿಗೆ ಹೇಳಿದ ಬಳಿಕ, ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಡೇಟ್ ಬದಲಿಸಲು ತಿಳಿಸಿದ್ದಾರೆ ಎಂಬ ಮಾಹಿತಿ ನನಗೆ ತಿಳಿಸಿದರಾದರೂ, ನಾನು ಡೇಟ್ ಬದಲಿಸಲು ಒಪ್ಪಲಿಲ್ಲ ಕಾರಣ ಬಹುತೇಕರಿಗೆ ನಾನು ಆಹ್ವಾನ ಮಾಡಿದ್ದಾಗಿದೆ, ಇದನ್ನೇ ರಾಜಕೀಯ ಮಾಡಿದ್ದಾರೆ ಎಂಬುದು ಸರಿಯಲ್ಲ, ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅರುಣಾಕರ ಶೆಟ್ಟಿಯವರಿಗೆ ಕರೆ ಮಾಡಿ ಅವರನ್ನು ಆಹ್ವಾನಿಸಿದ್ದಲ್ಲದೆ ಸಮಿತಿ ಸದಸ್ಯರಿಗೂ ತಿಳಿಸಲು ಹೇಳಿದ್ದೆ ಅವರು ಹೇಳಿದ್ದಾರೋ ಇಲ್ಲವೊ ಗೊತ್ತಿಲ್ಲ, ಇದು ಗ್ರಾಮ ದೇಗುಲ ಇಲ್ಲಿ ಯಾರೂ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ ಶಾಸಕ ಗುರ್ಮೆ.