ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಮತ್ತೊಂದು ಬಲಿ
ಟೋಲ್ ಸಂಗ್ರಹವೊಂದೇ ಗುರಿ, ಅಮಾಯಕ ಜೀವಕ್ಕಿಲ್ಲ ಬೆಲೆ
ರಾಷ್ಟ್ರೀಯ ಹೆದ್ದಾರಿ 66 ಅವ್ಯವಸ್ಥೆಗೆ ಸಾಲು ಸಾಲು ಹೆಣಗಳು ಉರುಳಿದರೂ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮೌನವಾಗಿದ್ದು, ಕೇವಲ ಟೋಲ್ ಸಂಗ್ರಹವೊಂದೇ ಗುರಿ ಎಂಬಂತ್ತೆ ವರ್ತಿಸುತ್ತಿರುವುದು ಸಾರ್ವಜನಿಕರನ್ನು ಇದೀಗ ಕೆರಳಿಸಿದೆ.
ಉಚ್ವಿಲ ಮುಖ್ಯ ಪೇಟೆಯಲ್ಲೇ ವಯೋವೃದ್ಧರೊಬ್ಬರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಇದೀಗ ನಡೆದಿದೆ.
ಮೃತರು ಕುಂಜೂರು ದೇವಳದ ಸಮೀಪದ ನಿವಾಸಿ ಶ್ರೀನಿವಾಸ ತೋಳಿತ್ತಾಯ(72), ಇವರು ತನ್ನ ಸಹಪಾಠಿಯೊ ಉಡುಪಿ ಆಸ್ಪತ್ರೆಯೊಂದಕ್ಕೆ ಹೋಗಲು ರಸ್ತೆ ದಾಟಲು ನಿಂತಿದ್ದ ವೇಳೆ ಉಡುಪಿ ಕಡೆಯಿಂದ ಬಂದ ಕಾರೊಂದು ಡಿಕ್ಕಿಯಾಗಿದೆ.
ಸಾಲು ಸಾಲು ಅಪಘಾತಗಳು…
ಈ ಹೆದ್ದಾರಿಯ ಅವ್ಯವಸ್ಥೆ ಯಿಂದಾಗಿ ನಡೆದ ಅಪಘಾತಗಳು ಒಂದೆರಡಲ್ಲ, ಅದೆಷ್ಟೋ ಅಮಾಯಕ ಜೀವಗಳು ಕಳೆದು ಹೋಗಿ ಬಹಳಷ್ಟು ಮನೆಗಳ ಬೆಳಕು ಹಾರಿ ಹೋದರೆ, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ನರಲುತ್ತಿರುವವರ ಸಂಖ್ಯೆಗೂ ಕಡಿಮೆ ಇಲ್ಲ, ಇಷ್ಟಾದರೂ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆ ಏಕೆ..? ಇವರನ್ನು ಎಚ್ಚರಿಸ ಬೇಕಾಗಿದ್ದ ಜನಪ್ರತಿನಿಧಿಗಳೆಲ್ಲಿ ಎಂಬುದು ಸಾರ್ವಜನಿಕರ ನ್ಯಾಯಯುತ ಪ್ರಶ್ನೆ.
ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಯಾವುದೇ ಅಡೆತಡೆಇಲ್ಲದೆ ಸುಂಕ ಪಡೆಯುವ ಟೋಲ್ ಸಂಸ್ಥೆ ಕೇವಲ ಸುಂಕ ಪಡೆಯುವುದೊಂದೇ ನಮ್ಮ ಕೆಲಸ ಎಂಬಂತ್ತಿದ್ದು, ಹೆದ್ದಾರಿ ಸುರಕ್ಷತೆಗಾಗಿ ಮಾಡಲೇ ಬೇಕಾದ ಬಹಳಷ್ಟು ಕೆಲಸಗಳನ್ನು ಬಾಕಿ ಉಳಿಸಿದ ಪರಿಣಾಮ, ಹೆದ್ದಾರಿ ದಾಟಲು ಜನ ಹರಸಹಾಸ ಪಡುತ್ತಿದ್ದು, ಅವರಲ್ಲಿ ಅಮಾಯಕ ಹಿರಿ ಜೀವಗಳು ಪ್ರಾಣ ಕಳೆದುಕೊಳ್ಳುತ್ತಿದೆ. ಈ ಅಪಘಾತಗಳ ಸಿಂಹಪಾಲು ಸಲ್ಲ ಬೇಕಾಗಿದ್ದು ಹೆಜಮಾಡಿ ಟೋಲ್ ಸಂಗ್ರಹ ಕಂಪನಿಗೆ, ಇಷ್ಟರಲ್ಲೇ ತಮ್ಮ ಹೊಣೆಗೇಡಿತನಕ್ಕೆ ಕೆಲವೊಂದು ಕೇಸುಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದು, ಮುಂದೆ ಇದಕ್ಕೆ ಪರಿಹಾರ ಮೊತ್ತವನ್ನೂ ಅವರಿಂದಲೇ ಭರಿಸುವ ಮೂಲಕ ಅವರ ಜವಾಬ್ದಾರಿಯನ್ನು ನೆನಪಿಸ ಬೇಕಾಗಿದೆ ಎನ್ನುತ್ತಾರೆ ಆಕ್ರೋಶಿತ ಜನ.