ಕ್ರಿಸ್ಮಸ್ ಸೌಹಾರ್ದ ಟ್ರೋಫಿ ನಂದಿಕೂರು ಸ್ಟೈಕರ್ಸ್ ಮಡಿಲಿಗೆ
ಪಡುಬಿದ್ರಿ ವರದಿ
ನಲವತ್ತು ವರ್ಷ ಮೇಲ್ಪಟ್ಟ ಪ್ರಾಂಚೈಸಿ ಮಾದರಿ ಕ್ರಿಕೆಟ್ ಪಂದ್ಯಾಕೂಟ ಕ್ರಿಸ್ ಮಸ್ ಸೌಹಾರ್ದ ಟ್ರೋಫಿ-2024 ಪಂದ್ಯಾಕೂಟದಲ್ಲಿ ಅಂತಿಮವಾಗಿ ನಂದಿಕೂರು ಸ್ಟೈಕರ್ಸ್ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಪಲಿಮಾರು ಪರಿಸರದ ಆರು ತಂಡಗಳ ನಡುವೆ ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ನಂದಿಕೂರು ಪ್ರತೀಕ್ ಕೋಟ್ಯಾನ್ ಹಾಗೂ ಸುಹಾಸ್ ಶೆಟ್ಟಿ ಮಾಲಿಕತ್ವದ ನಂದಿಕೂರು ಸ್ಟ್ರೈಕರ್ಸ್ ತಂಡ ನಗದು ಸಹಿತ ಕ್ರಿಸ್ಮಸ್ ಸೌಹಾರ್ದ ಟ್ರೋಫಿ ಪಡೆದರೆ, ಪೈನಲ್ ಪಂದ್ಯಾಟದಲ್ಲಿ ಉತ್ತಮ ಪೈಪೋಟಿ ನೀಡಿದ ಉತ್ತಮ ತಂಡ ಪಲಿಮಾರಿನ ಮಹದೇಶ್ವರ ತಂಡ ದ್ವಿತೀಯ ಸ್ಥಾನಿಯಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಲಿಮಾರು ಚರ್ಚ್ ಧರ್ಮ ಗುರುಗಳೊಂದಿಗೆ ಪಂಚಾಯತ್ ಉಪಾಧ್ಯಕ್ಷ ರಾಯೇಶ್ ಪೈ, ಮಾಜಿ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಮಾಜಿ ಅಧ್ಯಕ್ಷ ನವೀನಚಂದ್ರ ಸುವರ್ಣ, ಸಮಾಜ ಸೇವಕ ಹೋರಾಟಗಾರ ದಿನೇಶ್ ಕೋಟ್ಯಾನ್, ಗೋಪಾಲ್ ಪೂಜಾರಿ, ಉದ್ಯಮಿ ನಿಕ್ಸನ್, ಮ್ಯಾಕ್ಸಿಮ್ ಡಿಸೋಜಾ, ಇತರ ಗಣ್ಯರು ಉಪಸ್ಥಿತರಿದ್ದರು.