ಕಂಬಳ ಕ್ಷೇತ್ರದಲ್ಲಿ ದೊರೆತ ಚಿನ್ನದ ಪದಕವನ್ನು ಮಾರಿಯಮ್ಮನಿಗೆ ಅರ್ಪಣೆಮಾಡಿದ ಬಾಲಚಂದ್ರ ಶೆಟ್ಟಿ, ಪುಣೆ
ಕಾಪು ಹೊಸ ಮಾರಿಯಮ್ಮ ದೇಗುಲ ಸುಮಾರು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಸಹಸ್ರಾರು ಭಕ್ತಾಧಿಗಳು ವಿವಿಧ ರೀತಿಯ ದೇಣಿಗೆಯನ್ನು ತಾಯಿಗೆ ಅರ್ಪಿಸಿದರೆ, ಪುಣೆ ಉದ್ಯಮಿ ಎರ್ಮಾಳು ಪುಚ್ಚೂಟ್ಟು ಬೀಡು ಬಾಲಚಂದ್ರ ಎಲ್. ಶೆಟ್ಟಿಯವರು ಕಂಬಳ ಕ್ಷೇತ್ರದಲ್ಲಿ ಗೆದ್ದ ಎಲ್ಲಾ ಚಿನ್ನದ ನಾಣ್ಯಗಳನ್ನು ತಾಯಿಯ ಸ್ವರ್ಣ ಗದ್ದುಗೆಗೆ ಅರ್ಪಿಸುವ ಮೂಲಕ ತಾಯಿ ಮಾರಿಯಮ್ಮನ ಕೃಪೆಗೆ ಪಾತ್ರರಾಗಿದ್ದಾರೆ.
ಚಿನ್ನದೊಂದಿಗೆ ಅದಿನೈದು ಲಕ್ಷ ರೂಪಾಯಿಯ ಶಿಲಾ ಮೂರ್ತಿಯನ್ನು ಬಾಲಚಂದ್ರ ಎಲ್.ಶೆಟ್ಟಿ ದಂಪತಿಗಳು ಒಂದಾಗಿ ಸಪರ್ಮಣೆ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ದಾನಿ ಬಾಲಚಂದ್ರ ಎಲ್. ಶೆಟ್ಟಿ, ಬಹಳ ಹಿಂದಿನಿಂದಲೂ ಕಾಪು ಮಾರಿಯಮ್ಮನ ಭಕ್ತ ನಾಗಿದ್ದು, ಇದೀಗ ತಾಯಿಯ ದೇಗುಲ ನಿರ್ಮಾಣ ಸಂದರ್ಭದಲ್ಲಿ ತಾಯಿಯ ಸೇವೆ ಮಾಡುವ ಸುವರ್ಣ ಅವಕಾಶ ಲಭ್ಯವಾದ ಹಿನ್ನಲೆಯಲ್ಲಿ ಕಂಬಳದಲ್ಲಿ ಈ ಹಿಂದೆ ದೊರೆತ ಚಿನ್ನದ ಪದಕ ಸಹಿತ ಇದೀಗ ದೊರತ ಚಿನ್ನದ ಪದಕವನ್ನೂ ತಾಯಿಗೆ ಅರ್ಪಿಸಿದ್ದೇವೆ, ತಾಯಿ ಮಾರಿಯಮ್ಮ ಎಲ್ಲರನ್ನೂ ಆಶೀರ್ವದಿಸಲಿ ಎಂದರು.