ಹೆಜಮಾಡಿಯ ಮೃತ ಯುವಕರಿಗೆ ಅಂತಿಮ ವಿದಾಯ
ಗಣ್ಯರ ಸಂತಾಪ
ಮೀನುಗಾರಿಕೆಗೆ ತೆರಳಿ ಕಡಲ ಅಬ್ಬರಕ್ಕೆ ಬಲಿಯಾದ ಯುವಕರಿಬ್ಬರ ಅಂತ್ಯ ಸಂಸ್ಕಾರ ಸ್ವಗ್ರಾಮ ಹೆಜಮಾಡಿಯಲ್ಲಿ ನಡೆಯಿತು.
ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕ ಬಹುದಾದ ಪರಿಹಾರ ಮೊತ್ತವನ್ನು ಶೀಘ್ರವಾಗಿ ಕುಟುಂಬಕ್ಕೆ ತುಲುಪಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಸಹಿತ ತಹಶಿಲ್ದಾರರಲ್ಲಿ ಮಾತುಕತೆ ನಡೆಸಿರುವುದಾಗಿ ಶಾಸಕರು ತಿಳಿಸಿದ್ದಾರೆ.
ಅಂತ್ಯ ಸಂಸ್ಕಾರದಲ್ಲಿ ಬಾಗಿಯಾದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕಾಂಗ್ರೆಸ್ ಮುಖಂಡ ಗುಲಾಂ ಮೂಹಮ್ಮದ್ ಹೆಜಮಾಡಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಕುಟುಂಬಕ್ಕೆ ಸಾಂತ್ವನ ನೀಡಿದ್ದು, ಸಂತಾಪ ವ್ಯಕ್ತ ಪಡಿಸಿದ್ದಾರೆ.