ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಟೋಲ್ ವಿರುದ್ಧದ ಹೋರಾಟಗಾರರ ಸಭೆ
ಉಡುಪಿ ವರದಿ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಟೋಲ್ ಶುಲ್ಕ ವಿನಾಯಿತಿ ಬಗ್ಗೆ ಟೋಲ್ ಹೋರಾಟಗಾರ ಸಭೆ ನಡೆಯಿತು.
ಸಭೆಯಲ್ಲಿ ಟೋಲ್ ಗೇಟ್ ಗಳಲ್ಲಿನ ಬಹಳಷ್ಟು ಕುಂದು ಕೊರತೆಗಳ ಬಗ್ಗೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಗುಲಾಂ ಮೂಹಮ್ಮದ್, ಹೆಜಮಾಡಿ ಟೇಲ್ ಗೇಟ್ ನಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತ್ತಾಗಿದೆ, ಟೋಲ್ ಗೇಟ್ ಬಳಿಯ ನಾರಾಯಣ ಗುರು ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಹೆಜಮಾಡಿ ಪೇಟೆ ಸಹಿತ ಕೋಡಿ ಭಾಗಕ್ಕೆ ಸಂಚರಿಸುವ ವಾಹನ ಸವಾರರು ನಿತ್ಯ ಅನುಭವಿಸುವಂತ್ತಾಗಿದೆ. ಪ್ರಮುಖವಾಗಿ ಪಡುಬಿದ್ರಿಯಿಂದ ಹೆಜಮಾಡಿಗೆ ಬರುವ ವಾಹನಗಳು ಸರ್ವಿಸ್ ರಸ್ತೆ ಇಲ್ಲದೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಅನಿವಾರ್ಯ ಸ್ಥಿತಿ ಇದ್ದು, ಅದೇ ರಸ್ತೆಯ ಪಕ್ಕದಲ್ಲಿ ಕಾರ್ಯಚರಿಸುತ್ತಿರುವ ಹೋಟೆಲೊಂದರ ಮುಭಾಗ ರಸ್ತೆಗಂಟಿಕೊಂಡೇ ವಾಹನಗಳನ್ನು ರಾತ್ರಿ ಹಗಲೆನ್ನದೆ ಪಾರ್ಕ್ ಮಾಡುವುದರಿಂದ ಅಪಘಾತಗಳು ನಡೆಯುತ್ತಿದ್ದು ಈ ಬಗ್ಗೆ ತುರ್ತಾಗಿ ಕಾರ್ಯಚರಿಸುವಂತೆ ಜಿಲ್ಲಾ ಎಸ್ಪಿಯವರ ಗಮನಕ್ಕೆ ತಂದಿದ್ದಾರೆ.
ವಿಧಾನ ಪರಿಷತ್ ಶಾಸಕ ಕಿರಣ್ ಕುಮಾರ್ ಕೊಡ್ಗಿ , ಜಿಲ್ಲಾಧಿಕಾರಿ ವಿದ್ಯಾ ಕುಮಾರಿ , ಜಿಲ್ಲಾ ಎಸ್.ಪಿ ಡಾ. ಅರುಣ್ ಕುಮಾರ್, ಟೋಲ್ ಹೋರಾಟ ವಿರೋಧಿ ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ, ಮಧು ಆಚಾರ್ಯ, ರಾಲ್ಫೀ ಡಿಕೋಸ್ತ, ಸಂತೋಷ್ ಪಡುಬಿದ್ರಿ ಸಹಿತ ಸಾಸ್ತಾನ ಟೋಲ್ ವಿರುದ್ಧ ಹೋರಾಟ ಸಮಿತಿಯ ಪದಾಧಿಕಾರಿಗಳು ಸಹಿತ ಸದಸ್ಯರು ಪಾಲ್ಗೊಂಡಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.