ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಪುರಪ್ರವೇಶ
ಕಾಪು ವರದಿ
ಕಾಪು ಪೇಟೆ ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಡಿ.27ರಂದು ಸಮರ್ಪಿಸಲ್ಪಡಲಿರುವ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನಗಳ ಪುರಪ್ರವೇಶ ಮತ್ತು ಭವ್ಯ ಶೋಭಾಯಾತ್ರೆಯು ವಿಜೃಂಭಣೆಯಿಂದ ನಡೆಯಿತು.
ದಿವಂಗತ ಡಾ| ಬಾಲಕೃಷ್ಣ ಭಟ್ ಹಾಗೂ ದಿ. ಸುಗುಣಾ ಭಟ್ ಅವರ ಸ್ಮರಣಾರ್ಥ ಅವರ ಮಕ್ಕಳಾದ ಡಾ| ನಾಗಾನಂದ ಭಟ್ ಮತ್ತು ಸಹೋದರರು ಸೇವಾ ರೂಪದಲ್ಲಿ ಸಮರ್ಪಿಸಲಿರುವ ಭಂಡಿ ರಥ, ಗರುಡ ವಾಹನ ಮತ್ತು ಶೇಷ ವಾಹನವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಕಮಲಾಕ್ಷ ಭಟ್ ಮತ್ತು ವೈದಿಕ ವೃಂದದವರ ನೇತೃತ್ವದಲ್ಲಿ ಸ್ವಾಗತಿಸಿ, ಕಾಪು ಪೇಟೆಯಿಂದ ಶ್ರೀ ದೇವಸ್ಥಾನದವರೆಗೆ ವಿವಿಧ ಬಿರುದಾವಳಿಯಲ್ಲಿ ಶೋಭಾಯಾತ್ರೆ ಸಹಿತವಾಗಿ ಪುರ ಪ್ರವೇಶದೊಂದಿಗೆ ಬರಮಾಡಿ ಕೊಳ್ಳಲಾಯಿತು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಪ್ರಸಾದ್ ಗೋಕುಲ್ದಾಸ್ ಶೆಣೈ, ಮಾಜಿ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.