ಅಪಘಾತ

ಆಳಕ್ಕೆ ಉರುಳಿದ ಕ್ರೇನ್ ಅಪರೇಟರ್ ಸಾವು

ಮಂಗಳೂರು ವರದಿ

ಸುಮಾರು 20 ಅಡಿ ಆಳದ ಕಂದಕಕ್ಕೆ ಕ್ರೇನ್ ಉರುಳಿಬಿದ್ದು ಕ್ರೇನ್ ಅಪರೇಟರ್ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಉತ್ತರ ಪ್ರದೇಶ ಮೂಲದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಜಾಧವ್ ಮೃತಪಟ್ಟವರು. ಕ್ರೇನ್ ಅದ್ಯಪಾಡಿಯಿಂದ ಕೆಂಜಾರ್ ಜಂಕ್ಷನ್ ಕಡೆಗೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆಯ ಇಳಿಜಾರಿನ ಭಾಗದಲ್ಲಿ ಕ್ರೇನ್ ನಿಯಂತ್ರಣ ಕಳೆದುಕೊಂಡು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.

ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

You may also like

ಅಪಘಾತ

ತೆಂಗಿನ ಮರದಿಂದ ಮನೆಯ ಗೇಟಿನ ಸರಳಿನ ಮೇಲೆ ಬಿದ್ದ ವ್ಯಕ್ತಿ

  • November 12, 2024
Share this… Whatsapp Facebook Twitter ಕಾಯಿ ಕೀಳಳೆಂದು ತೆಂಗಿನ ಮರವೇರಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಮರದಿಂದ ಗೇಟಿನ ಸರಳಿಗೆ ಬಿದ್ದು ಕಾಲು ಸಿಲುಕಿಕೊಂಡ ಘಟನೆಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ಸಂಭವಿಸಿದೆ.
ಅಪಘಾತ

ಕಡಿತದ ಮತ್ತಿನಲ್ಲಿ ಇನೋವಾ ಚಾಲನೆ: ಕೇರಳದ ಇಬ್ಬರು ಯುವಕರು ವಶಕ್ಕೆ

  • November 12, 2024
Share this… Whatsapp Facebook Twitter ಕಡಿತದ ನಶೆಯಲ್ಲಿ ಕೇರಳ ಮೂಲದ ಯುವಕರಿಬ್ಬರು ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತ ನಡೆಸಿ ಅಂತಿಮವಾಗಿ ಪಡುಬಿದ್ರಿ ಪೊಲೀಸರ ಅಥಿತಿಯಾಗಿದ್ದಾರೆ.