ಕಬಡ್ಡಿ ಆಟಗಾರ ಪ್ರೀತಂ ಕುಸಿದು ಬಿದ್ದು ಸಾವು
ಉಡುಪಿ ವರದಿ
ಉದಯೋನ್ಮುಖ ಕಬಡ್ಡಿ ಆಟಗಾರ ಕಬಡ್ಡಿ ಪಂದ್ಯಾಟದ ಬಳಿಕ ಹೃದಯಘಾತದಿಂದ ಕುಸಿದು ಬಿದ್ದು ಮೃತಪಟ್ಟ ಆತಂಕಕಾರಿ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ಉಡುಪಿ ಮಟ್ಟುಪಾಡಿ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26), ಈತನೇ ಮೃತ ನತದೃಷ್ಟ.
ಶುಕ್ರವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆಯಲಿದ್ದ ಕಬಡ್ಡಿ ಪಂದ್ಯಾಕೂಟಕ್ಕೆ ತನ್ನ ತಂಡದೊಂದಿಗೆ ತೆರಳಿದ್ದ, ಅಲ್ಲಿ ಕಬಡ್ಡಿ ಆಟವಾಡಿ ಹೊರ ಬಂದ ಕೆಲವೇ ಹೊತ್ತಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು, ಸಹ ಆಟಗಾರರು ಆತನನ್ನು ವಿಚಾರಿಸುತ್ತಿದಂತೆ ಕುಸಿದು ಬಿದ್ದಿದ್ದರು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದ.
ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಬಾಳ ಬಂಡಿ ಸಾಗಿಸುವುದಕ್ಕಾಗಿ ಹೊರ ದೇಶಕ್ಕೆ ಉದ್ಯೋಗಕ್ಕಾಗಿ ಹೋಗುವ ಎಲ್ಲಾ ಪೂರ್ವ ತಯಾರಿ ನಡೆಸಿದ್ದ, ಆದರೆ ವಿಧಿ ಆತನ ಬದುಕಿಗೆ ಕ್ರೂರವಾಗಿ ಅಂತ್ಯವಾಡಿದ್ದು ಮಾತ್ರ ಆತನ ಕುಟುಂಬವರ್ಗ ಹಾಗೂ ಆತನ ಬಳಗಕ್ಕೆ ನುಂಗಲಾರದ ತುತ್ತಾಗಿದೆ.