ಅನುಮತಿ ರಹಿತ ನಡೆಸಿದ ಜಾಥ !
ಎಸ್ ಡಿ ಪಿ ಐ ಪ್ರಮುಖರ ವಿರುದ್ಧ ಪ್ರಕರಣ ದಾಖಲು
ಪಡುಬಿದ್ರಿ ವರದಿ
ಅನುಮತಿ ಪಡೆಯದೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಪ್ರಮುಖರು ಅನುಮತಿ ಇಲ್ಲದೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂಬ ಕಾರಣಕ್ಕೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಕ್ಷದ ಪ್ರಮುಖರಾದ ರಿಯಾಜ್ ಕಡಂಬು, ಹನೀಫ್ ಮೂಳೂರು, ನೂರುದ್ಧೀನ್ ಮಲ್ಲಾರು, ಫಿರೋಜ್ ಕಂಚಿನಡ್ಕ, ತೌಫಿಕ್ ಉಚ್ಚಿಲ, ಮಜೀದ್ ಉಚ್ವಿಲ, ಇಬ್ರಾಹಿಂ ಕಂಚಿನಡ್ಕ ಸಹಿತ ನೂರಾರು ಮಂದಿ ಸ್ಥಳದಲ್ಲಿದ್ದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಕರ್ನಾಟಕ ವತಿಯಿಂದ ಯು ಟರ್ನ್ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2 ಉಡುಪಿಯಿಂದ ಹಮ್ಮಿಕೊಂಡಿದ್ದು, ಜಾಥ ಹೆಜಮಾಡಿ ಟೋಲ್ ಗೇಟ್ ಬಳಿ ಬಂದಾಗ ಪಕ್ಷದ ಪ್ರಮುಖರಲ್ಲಿ ಜಾಥಕ್ಕೆ ಅನುಮತಿ ಇದೆಯೇ ಎಂದಾಗ ಪ್ರಮುಖರೆಲ್ಲಾರೂ ಅನುಮತಿ ಇಲ್ಲ ಎಂದಿದ್ದಾರೆ. ಅನುಮತಿ ರಹಿತವಾಗಿ ಜಾಥ ನಡೆಸಿದ ಹೆದ್ದಾರಿ ಸಂಚಾರ ಸಹಿತ ಸಾರ್ವಜನಿಕರಿಗೆ ಅಡಚಣೆ ಉಂಟಾಗುತ್ತೆ ಎಂಬುದಾಗಿ ಪೊಲೀಸರು ತಿಳಿಸಿದರೂ, ಸುಮಾರು ನೂರು ಜನರನ್ನು ಸೇರಿಸಿ ಅವರಿಗೂ ಪ್ರಚೋದನೆ ನೀಡಿ ಹೆದ್ದಾರಿಯಲ್ಲಿ ಜಾಥ ಮುಂದುವರಿಸಲು ಸಿದ್ಧರಾದಾಗ ಪಡುಬಿದ್ರಿ ಎಸ್ಸೈ ಹೇಳಿದರೂ ಕೇಳದೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಘೋಷಣೆಗಳನ್ನು ಕೂಗುತ್ತಾ ಕಾರು ಬೈಕ್ ಗಳಲ್ಲಿ ಮುಂದೆಸಾಗಿದ್ದು ಇದರಿಂದ ಹೆದ್ದಾರಿ ಸುಗಮ ಸಂಚಾರಕ್ಕೆ ತೊಂದರೆ ಮಾಡುವ ಮೂಲಕ ಕಾನೂನಿನ ಉಲ್ಲಂಘನೆ ಮಾಡಿದ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.