ಕ್ರೈಂ

ರಸ್ತೆ ಪಕ್ಕದಲ್ಲಿ ದನದ ಮಾಂಸ, ತ್ಯಾಜ್ಯ ಎಸೆದು ವಿಕೃತಿ- ಕ್ರಮ‌ಕೈಗೊಳ್ಳುವಂತೆ ಒತ್ತಾಯ

ಉಡುಪಿ ವರದಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರು ದೂಪದ ಕಟ್ಟೆಯ ಬಳಿ ದನದ ತ್ಯಾಜ್ಯ ಮತ್ತು ಮಾಂಸವನ್ನು ರಸ್ತೆಯಲ್ಲೇ ಎಸೆದು ವಿಕೃತಿ ಮೆರೆದ ಘಟನೆ ಸಂಭವಿಸಿದೆ.ಹಸುವಿನ ಮಾಂಸ ಮಾಡಿದ ನಂತರ ತ್ಯಾಜ್ಯವನ್ನು ಚೀಲದಲ್ಲಿ ಕಟ್ಟಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ತ್ಯಾಜ್ಯವು ದನದ ತಲೆಬಾಗ ಹಾಗೂ ಹೊಟ್ಟೆಯ ಒಳ ಭಾಗವನ್ನು ಒಳಗೊಂಡಿದೆ.ಜನ ಓಡಾಡುವ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್ ಚೀಲದೊಳಗೆ ತ್ಯಾಜ್ಯ ಎಸೆಯಲಾಗಿದ್ದು ದುರ್ನಾತ ಬೀರುತ್ತಿದೆ.ಒಂದು ವಾರದ ಹಿಂದೆಯೂ ಇದೇ ಸ್ಥಳದಲ್ಲಿ ಗೋವಿನ ತ್ಯಾಜ್ಯ ಏಸೆಯಲಾಗಿದ್ದು
ಪಂಚಾಯತ್ ವತಿಯಿಂದ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.ಆ
ಸ್ಥಳವನ್ನು ಶುಚಿಗೊಳಿಸಿದ ಬಳಿಕ ಅದೇ ಸ್ಥಳದಲ್ಲಿ ಮತ್ತೆ ಅದೇ ರೀತಿ ಗೋವಿನ ತ್ಯಾಜ್ಯ ಎಸೆಯಲಾಗಿದೆ.
ಗಲಭೆ ಸೃಷ್ಟಿಸುವ ಉದ್ದೇಶದಿಂದ ಹಸುವಿನ ತ್ಯಾಜ್ಯವನ್ನು ಉದ್ದೇಶಪೂರ್ವಕ ಎಸೆಯಲಾಗಿದೆ ಎಂದು ಸ್ಥಳೀಯ ಹಿಂದೂ ಪರ ಸಂಘಟನೆಗಳು ಆರೋಪ ಮಾಡಿವೆ.

Leave a comment

Your email address will not be published. Required fields are marked *

You may also like

ಉಡುಪಿ ಕ್ರೈಂ

ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

  • September 26, 2024
Share this… Whatsapp Facebook Twitter ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೃಹತ್ ಟಿಪ್ಪರಲ್ಲಿ ಅಕ್ರಮ ಮರಳು ಪತ್ತೆಯಾಗಿದ್ದು ಪಡುಬಿದ್ರಿ ಪೊಲೀಸರು ಮರಳು ಸಹಿತ ಟಿಪ್ಪರನ್ನು
ಕ್ರೈಂ

ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ

  • November 12, 2024
Share this… Whatsapp Facebook Twitter ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರು ಸಮೀಪದ ಇರಂದಾಡಿ ಬಸ್ ತಂಗುದಾಣದ ಹಿಂಭಾಗದಲ್ಲಿ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು