ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಪಡುಬಿದ್ರಿ ವರದಿ
ಎರ್ಮಾಳು ಸರಕಾರಿ ಸಯುಕ್ತ ಪ್ರೌಢ ಶಾಲೆಯಲ್ಲಿ ಅದ ಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅದಮಾರು ಘಟಕದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆಗೊಂಡಿತು.
ಅದಮಾರು ಮಠಾಧೀಶರಾದ ಹಾಗೂ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಈಶಪ್ರಿಯ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಎನ್ಎಸ್ಎಸ್ ಶಿಬಿರದಲ್ಲಿ ಸ್ವಚ್ಛತೆ ಸಹಬಾಳ್ವೆ ಸಮಾಜಮುಖಿಯಾದ ಕೆಲಸ ಇದನ್ನು ಕಲಿಯುವುದಕ್ಕೆ ತುಂಬಾ ಅವಕಾಶವಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ಪಡುಬಿದ್ರಿ ವ್ಯವಸಾಯ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವೈ, ಸುಧೀರ್ ಕುಮಾರ್, ಎನ್ಎಸ್ಎಸ್ ವ್ಯಕ್ತಿತ್ವ ವಿಕಾಸಕ್ಕೆ ರಹ ದಾರಿಯಾಗಿದೆ ಇದರಲ್ಲಿ ಎಷ್ಟು ಜಾಸ್ತಿ ತೊಡಗಿಸಿಕೊಂಡಿರುತ್ತೀರೋ ಅಷ್ಟು ಪ್ರಯೋಜನ ಲಭಿಸುತ್ತದೆ ಎಂದರು.
ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಗೌರವಕೋಶಾಧಿಕಾರಿ ಗಣೇಶ ಹೆಬ್ಬಾರ್ ಶಿಬಿರದಲ್ಲಿ ಶಿಸ್ತು ಸಮಯ ಪಾಲನೆ ಬದುಕುವ ಕಲೆ ಕಲಿಯುವುದೇ ಮುಖ್ಯವಾಗಿರುತ್ತದೆ ಎಂದರು.
ಸರಕಾರಿ ಸಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸುಗುಣ ರವರು ಶಿಬಿರಾರ್ಥಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿ ಶುಭ ಹಾರೈಸಿದರು. ಆಡಳಿತ ಮಂಡಳಿಯ ಪ್ರತಿನಿಧಿಯಾದ ಪ್ರೊ ನಿತ್ಯಾನಂದ, ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ , ಎನ್ಎಸ್ಎಸ್ ನೋಡಲ್ ಅಧಿಕಾರಿ ಡಾ. ಜಯಶಂಕರ್ ಕಂಗಣ್ಣಾರು ಉಪಸ್ಥಿತರಿದ್ದರು.
ಶಿಬಿರಾರ್ಥಿ ನಿತೀಶಾ ಸ್ವಾಗತಿಸಿದಳು. ಕಾರ್ತಿಕ್ ಧನ್ಯವಾದವಿತ್ತರು. ಮನೀಶ್ ಕಾರ್ಯಕ್ರಮ ನಿರೂಪಿಸಿದರು.
ಎರ್ಮಾಳು ಬಡಾ ಯಕ್ಷ ಛಾಯಾಗ್ರಾಹಕ ಮನೋಹರ್ ಎಸ್ ಕುಂದರ್ ರವರ ಅತ್ಯಪೂರ್ವ ಛಾಯಾಚಿತ್ರ ಪ್ರದರ್ಶನ ಶಿಬಿರದಲ್ಲಿ ಏರ್ಪಡಿಸಲಾಗಿದೆ ಏಳು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ಶಾಲಾ ಪರಿಸರದ ಸ್ವಚ್ಛತೆ, ಎರ್ಮಾಳು ಬೀಚ್ ಸ್ವಚ್ಛತೆ, ಗಾಳಿಪಟ ಉತ್ಸವ, ಗೂಡುದೀಪ ತಯಾರಿ ವ್ಯಕ್ತಿತ್ವ ವಿಕಸನ ದ ಪ್ರಾತ್ಯಕ್ಷಿಕೆಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂಬುದಾಗಿ ಸಂಘಟಕರು ತಿಳಿಸಿದರು.