ಪರಿಸರ ಮಾಲಿನ್ಯ ವೆಸಗುತ್ತಿದ್ದ ಪಿಶ್ ಪ್ಯಾಕ್ಟರಿಗೆ ಬೀಗ ಜಡಿದ ತಹಶೀಲ್ದಾರ್
ಕಾಪು ವರದಿ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡು ಗ್ರಾಮದ ತವಕ್ಕಲ್ ಪಿಶ್ ಫ್ಯಾಕ್ಟರಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಉಂಟು ಮಾಡುತ್ತಿತ್ತು. ಇಂದು ಆ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿಕೊಂಡು ನೆಲ ಜಲದ ರಕ್ಷಣೆ ಮಾಡಿ ಕಾಪು ತಹಶಿಲ್ದಾರ್ ಪ್ರತಿಭಾ ಜನಪರ ದಿಟ್ಟ ನಿರ್ಧಾರ ತಳಿದಿದ್ದಾರೆ.
ಬಹಳಷ್ಟು ವರ್ಷಗಳಿಂದ ಕಾರ್ಯಚರಿಸುತ್ತಿದ್ದ ಈ ಪಿಶ್ ಪ್ಯಾಕ್ಟರಿ ಪರಿಸರ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಪಿಶ್ ಕಟಿಂಗ್ ಕಾರ್ಯ ನಡೆಸುತ್ತಿದ್ದರಿಂದ ಪರಿಸರ ದುರ್ನಾತ ಮಯವಾಗಿತ್ತು. ಜನರು ಈ ದುರ್ವಾಸನೆಗೆ ಬೇಸತ್ತು ಇದರ ವಿರುದ್ಧ ಕ್ರಮಕ್ಕಾಗಿ ಬಹಳಷ್ಟು ಇಲಾಖೆಗಳ ಕದ ತಟ್ಟಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪರಿಸರ ಮಾಲಿನ್ಯ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳಲು ಶಿಫಾರಸು
ಈ ಕಾರ್ಖಾನೆಯನ್ನು ಪರಿಶೀಲಿಸಿ ಅಲ್ಲಿಯ ಅವ್ಯವಸ್ಥೆಯನ್ನು ಮನಗಂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದು ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಹೊರಕ್ಕೆ ಬಿಡುತ್ತಿದೆ ಆದ್ದರಿಂದ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಹಳ ವರ್ಷಗಳ ಹಿಂದೆಯೇ ಶಿಫಾರಸು ಮಾಡಿತ್ತು.
ಜಿಲ್ಲಾಧಿಕಾರಿಯವರು ಈ ವರದಿಯ ಆಧಾರದ ಮೇಲೆ ಈ ತವಕ್ಕಲ್ ಪಿಶ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಹಶಿಲ್ದಾರ್ ಗೆ ಆದೇಶ ಮಾಡಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಯವರ ಆದೇಶದಂತೆ ಕಾಪು ತಹಶಿಲ್ದಾರ್ ಪ್ರತಿಭಾ ಆರ್ ಕಾರ್ಖಾನೆಯನ್ನು ಮುಚ್ಚಿಸಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕಾನೂನು ಪ್ರಕಾರ ಕ್ರಮ:
Tawakkal Fish Traders ಸ. ನಂ. 88/1E1P2 ಪಡು ಗ್ರಾಮ ಇವರು CLOSURE DIRECTIONS UNDER SECTION 33(A) of the water (Prevention and Control of Pollution) Act 1974 read with the Rule 34 of the Karnataka Board for the prevention and control of water pollution) Rules 1976 ರಡಿಯಲ್ಲಿ ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ, 1974 ಅನುಸರಿಸದೆ ಉದ್ಯಮವನ್ನು ನಡೆಸುತ್ತಿದ್ದುದು ಕಂಡು ಬಂದಿದೆ. ಆದ್ದರಿಂದ ಸದ್ರಿ ಉದ್ಯಮವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಚ್ಚರಿಕೆಯ ಗಂಟೆ
ಕಾಪು ತಾಲೂಕಿನಲ್ಲಿ ಹಲವಾರು ಜನವಿರೋಧಿಯಾಗಿ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳಿಗೆಲ್ಲ ಈ ಕ್ರಮ ಎಚ್ಚರಿಕೆಯ ಗಂಟೆಯಾಗಿದೆ.
ಪರಿಸರ ಮಾಲಿನ್ಯ ಉಂಟು ಮಾಡದಂತೆ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡು ಮುಂದುವರಿಯಬೇಕಾದ ಅನಿವಾರ್ಯತೆಯನ್ನು ಇಂದು ತಹಶಿಲ್ದಾರ್ ಪ್ರತಿಭಾ ಹುಟ್ಟು ಹಾಕಿದ್ದಾರೆ.
ಜನವಸತಿ ಇರುವ ಪುರಸಭಾ ವ್ಯಾಪ್ತಿಯ ಪಡು ಗ್ರಾಮದ ಜನತೆ ಅಕ್ಷರಶಃ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇತ್ತು. ಮೀನಿನ ದುರ್ನಾತ ಬಹಳ ದೂರದವರೆಗೂ ಹಬ್ಬುತ್ತಿತ್ತು. ಹಲವು ದೂರು ನೀಡಿದರೂ ಅದು ಪ್ರಯೋಜನಕಾರಿಯಾಗಿರಲಿಲ್ಲ. ಆದರೆ ಇಂದು ತಹಶಿಲ್ದಾರ್ ಪ್ರತಿಭಾ ರವರು ಈ ದುರ್ನಾತ ಬೀರುತ್ತಿದ್ದ ಫ್ಯಾಕ್ಟರಿ ಮುಚ್ಚಿಸಿ ಜನಗಳಿಗೆ ರಿಲೀಫ್ ನೀಡಿದ್ದಾರೆ. ಅಧಿಕಾರಿಯ ದಿಟ್ಟ ನಡೆಗೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ತಹಶಿಲ್ದಾರ್ ಪ್ರತಿಭಾ ಆರ್:
“ನಮ್ಮ ತಾಲ್ಲೂಕಿನಲ್ಲಿ ಯಾವುದೇ ಫ್ಯಾಕ್ಟರಿ ಪರಿಸರ ಮಾಲಿನ್ಯ ಉಂಟು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರೆ ಅದನ್ನು ತಕ್ಷಣವೇ ಮುಚ್ಚಲು ಶಿಫಾರಸು ಮಾಡಲಾಗುವುದು. ಉದ್ಯಮ-ಅಭಿವೃದ್ದಿ ಎಷ್ಟು ಮುಖ್ಯವೋ ಪರಿಸರ ರಕ್ಷಣೆಯೂ ಅಷ್ಟೇ ಮುಖ್ಯ. ಕಾರ್ಖಾನೆಗಳವರು ಸೂಕ್ತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯೊಂದಿಗೆ ಉದ್ಯಮ ನಡೆಸಿದರೆ ನಮ್ಮ ಅಭ್ಯಂತರವೇನಿಲ್ಲ. ತಾಲ್ಲೂಕಿನ ನೆಲ-ಜಲದ ರಕ್ಷಣೆ ನನ್ನ ಆದ್ಯತೆ. ಇವತ್ತಿನ ಈ ಕ್ರಮ ಉಳಿದ ಕಂಪನಿಗಳ ಮಾಲೀಕರುಗಳಿಗೆ ಎಚ್ಚರಿಕೆಯ ಗಂಟೆಯಾಗಬೇಕು”
ಎಂದು ತಹಶಿಲ್ದಾರ್ ಹೇಳಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಕೀರ್ತಿಕುಮಾರ್ ರವರಿಗೆ ಸೀಝ್ ಮಾಡಿದ ಫ್ಯಾಕ್ಟರಿಯ ಬೀಗದ ಕೀ ಹಸ್ತಾಂತರಿಸಲಾಯಿತು.
ಈ ಕಾರ್ಯಚರಣೆಯಲ್ಲಿ ಕಂದಾಯ ಅಧಿಕಾರಿ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ವೆಂಕಟೇಶ್, ಪೋಲೀಸ್ ಇನ್ಸ್ಪೆಕ್ಟರ್, ಮೆಸ್ಕಾಂ ಅಧಿಕಾರಿ ಅಜಯ್, ಪುರಸಭಾ ಅಧಿಕಾರಿ ಜೊತೆಗಿದ್ದರು.