Uncategorized

ಇನ್ನಾ ಟವರ್ ವಿರುದ್ಧದ ಹೋರಾಟ ಎತ್ತ ಸಾಗುತ್ತಿದೆ.

ಹೋರಾಟದಲ್ಲಿ ಎಲ್ಲರೊಂದಾಗಿದ್ದ ಕ್ಷಣ

ಪಕ್ಷಾತೀತವಾಗಿ ನಡೆಯುತ್ತಿದ್ದ ಟವರ್ ವಿರುದ್ಧದ ಹೋರಾಟ ಇದೀಗ ಪಥ ಬದಲಿ ರಾಜಕೀಯ ಕೆಸರಾಟ ಆರಂಭಿಸಿದ್ದು, ಮುಂದೆ ಈ ಹೋರಾಟ ಎತ್ತ ಸಾಗುವುದೋ ? ಏನೇ ಆದರೂ ಇದರಿಂದ ನೋವು ಅನುಭವಿಸುವವರು ಮಾತ್ರ ನೈಜ್ಯ ಸಂತ್ರಸ್ತರು ಎಂಬುದು ಅಷ್ಟೇ ಸತ್ಯ.

ಪಕ್ಷಾತೀತವಾಗಿ ನಡೆಯುತ್ತಿದ್ದ ಹೋರಾಟದಿಂದಾಗಿ ಟವರ್ ನಿರ್ಮಾಣಕ್ಕೆ ಜಿಲ್ಲಾಢಳಿತದ ಒತ್ತಾಸೆಯೊಂದಿಗೆ ಅದೆಷ್ಟೋ ಬಾರಿ ಖಾಸಗಿ ಕಂಪನಿ ಪ್ರಯತ್ನ ಪಟ್ಟರೂ ಸತತ ವಿಫಲ ಅನುಭವಿಸಿದೆ. ಇನ್ನು ಈ ಜನರ ಒಗ್ಗಟ್ಟಿನ ಹೋರಾಟದಿಂದಾಗಿ ಟವರ್ ನಿರ್ಮಾಣ ಈ ಭಾಗದಲ್ಲಿ ಅಸಾಧ್ಯ ಎಂಬ ಕಾಲಘಟ್ಟದಲ್ಲಿ ಹೋರಾಟ ಸಮಿತಿ ಇಬ್ಬಾಗ ಎಂಬಂತ್ತಾಗಿದ್ದು ಮಾತ್ರ ದುರಾದೃಷ್ಟ ಎನ್ನದೆ ಬೇರೆನು ಅನ್ನೊಣ.

ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸುತ್ತಿದ್ದಂತೆ, ಇನ್ನೊಬ್ಬರು ತಿರುಗೇಟು ನೀಡುವ ಮೂಲಕ ಸಮಸ್ಯೆ ಜಟಿಲವಾಗಿದ್ದು, ಎದುರಾಳಿ ಟವರ್ ನಿರ್ಮಾಣಗಾರರಿಗೆ ವರದಾನವಾಗುವ ಬಗ್ಗೆ ಸಂತ್ರಸ್ತರು ನೋವು ಅನುಭವಿಸುವಂತ್ತಾಗಿದೆ.

ತಮ್ಮ ತಮ್ಮ ಸ್ವಪ್ರತಿಷ್ಠೆಗೆ ಹೋರಾಟವನ್ನು ಬಲಿ ನೀಡಲು ಮುಂದಾದ ಅವಳಿ ಪಕ್ಷಗಳ ಮುಖ್ಯಸ್ಥರುಗಳು ಒಂದು ಕ್ಷಣ ಅಲೋಚಿಸಿದ್ದರೆ ಈ ರೀತಿಯಾಗಿ ಹೋರಾಟವನ್ನು ಬಲಿ ನೀಡುವ ಕೆಟ್ಟ ನಿರ್ಧಾರಕ್ಕೆ ಮುಂದಾಗುತ್ತಿಲ್ಲವೊ ಏನೋ.. ಇನ್ನೂ ಕಾಲ ಮಿಂಚಿಲ್ಲ ತಮಗೆ ಒಂದಿಷ್ಟು ನೋವಾದರೂ ನಮ್ಮ ಗ್ರಾಮದ ಒಳಿತಿಗಾಗಿ ಎಂಬಂತೆ ತಮ್ಮ ವೈಯಕ್ತಿಕ ಒಣ ಪ್ರತಿಷ್ಟೆಯನ್ನು ಬದಿಗೊತ್ತಿ ಎಲ್ಲರೊಂದಾಗಿ ಹೋರಾಟ ನಡೆಸುವ ಮೂಲಕ ಗ್ರಾಮದ ಹಾಗೂ ಗ್ರಾಮದ ಜನತೆಯ ಋಣವನ್ನು ತೀರಿಸಲು ಮುಂದಾಗ ಬೇಕಿದೆ.

Leave a comment

Your email address will not be published. Required fields are marked *

You may also like

Uncategorized

ಜಾತಿ ಮತ ಭೇದ ಮರೆತು ಆಚರಿಸುವ ಹಬ್ಬ ಹೆಜಮಾಡಿ ಜುಮ್ಮಾ ಮಸೀದಿಯ ಉರೂಸ್ ಸಮಾರಂಭ

  • November 29, 2024
Share this… Whatsapp Facebook Twitter ಪಡುಬಿದ್ರಿ ವರದಿ ಕನ್ನಂಗಾರಿನ ಇತಿಹಾಸ ಪ್ರಸಿದ್ದ ಜುಮ್ಮಾ ಮಸೀದಿಯ ವಾರ್ಷಿಕ ಉರೂಸ್ ಸಮಾರಂಭ ಇದೇ ಬರುವ ಎಪ್ರಿಲ್ ಹನ್ನೊಂದರಿಂದ ಹತ್ತೊಂಭತ್ತರ
Uncategorized

ಜಿಲ್ಲಾ ಮಟ್ಟದ ಕ್ರಿಸ್ಮಸ್ ಕ್ಯಾರೋಲ್ ಗಾಯನ ಸ್ಪರ್ಧೆ-2024ಕ್ಕೆ ಚಾಲನೆ

Share this… Whatsapp Facebook Twitter ಮಂಗಳೂರು ವರದಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೂಡಗು ಜಿಲ್ಲೆ ಇದರ ವತಿಯಿಂದ ಕೂಡಿಗೆಯ ಆಂಜೆಲಾ ವಿದ್ಯಾನಿಕೇತನಯಲ್ಲಿ ನಡೆದ ಜಿಲ್ಲಾ ಮಟ್ಟದ