ಕ್ರೈಂ

ಕರ್ತವ್ಯಲೋಪ ದ.ಕ. ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅಮಾನತು

ಮಂಗಳೂರು ವರದಿ

ಕರ್ತವ್ಯ ಲೋಪವೆಸಗಿದ ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಮುಂದಿನ ಆದೇಶ ಬರುವ ತನಕ ಅಮಾನತುಗೊಳಿಸಿ ಡಿ.4ರಂದು ಆದೇಶ ಹೊರಡಿಸಲಾಗಿದೆ.

ಕೆಲ ದಿನಗಳ ಹಿಂದೆ ಪೊಲೀಸರು ಕಾರಾಗೃಹಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಜೈಲಿನೊಳಗೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಆ ಬಳಿಕ ಬಿ.ಟಿ. ಓಬಳೇಶಪ್ಪ ಅವರನ್ನು ಅಮಾನತುಗೊಳಿಸಲಾಗಿತ್ತು.

ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಕೆ.ಎನ್. ಮೋಹನ್ ಕುಮಾರ್ ಅವರನ್ನು ಮಂಗಳೂರು ಕಾರಾಗೃಹದ ಅಧೀಕ್ಷಕರ ಪ್ರಭಾರ ವಹಿಸಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ದೇವಜ್ಯೋತಿ ರೇ ತಿಳಿಸಿದ್ದಾರೆ.

ಜು.25ರಂದು ಮುಂಜಾನೆ 4 ಗಂಟೆಗೆ, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು, ಮೂವರು ಎಸಿಪಿಗಳು, 15. ಇನ್‌ ಸ್ಪೆಕ್ಟರ್‌ಗಳು ಸೇರಿದಂತೆ 150 ಪೊಲೀಸರ ಪಡೆ ಜೈಲಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಗಾಂಜಾ ಸಹಿತ ಹಲವಾರು ಪ್ಯಾಕೆಟ್ ಮಾದಕ ವಸ್ತುಗಳು, 25 ಮೊಬೈಲ್‌ ಫೋನ್, ಬ್ಲೂಟೂಥ್, ಐದು ಇಯರ್ ಫೋ ನ್, ಪೆನ್ ಡೈವ್, ಎರಡು ಚಾರ್ಜರ್‌ ಗಳು, ಕತ್ತರಿಗಳು, ಮೂರು ಕೇಬಲ್ ವಶಪಡಿಸಲಾಗಿತ್ತು. ಈ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Leave a comment

Your email address will not be published. Required fields are marked *

You may also like

ಉಡುಪಿ ಕ್ರೈಂ

ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

  • September 26, 2024
Share this… Whatsapp Facebook Twitter ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೃಹತ್ ಟಿಪ್ಪರಲ್ಲಿ ಅಕ್ರಮ ಮರಳು ಪತ್ತೆಯಾಗಿದ್ದು ಪಡುಬಿದ್ರಿ ಪೊಲೀಸರು ಮರಳು ಸಹಿತ ಟಿಪ್ಪರನ್ನು
ಕ್ರೈಂ

ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ

  • November 12, 2024
Share this… Whatsapp Facebook Twitter ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರು ಸಮೀಪದ ಇರಂದಾಡಿ ಬಸ್ ತಂಗುದಾಣದ ಹಿಂಭಾಗದಲ್ಲಿ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು