ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ ಅಪರಾಧಿಗೆ ಶಿಕ್ಷೆ ಪ್ರಕಟ
ಮoಗಳೂರು ವರದಿ
ಮನೆಗೆ ಟಿವಿ ನೋಡಲು ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬoಧಿಸಿದoತೆ ಅಪರಾಧಿಗೆ 20 ವರ್ಷಗಳ ಜೈಲು ಮತ್ತು 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಅಪರಾಧಿಯನ್ನು ಬೆಳ್ತಂಗಡಿ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಮನೆಯ ಕೆ. ಸುಧೀರ್(27) ಎಂದು ಗುರುತಿಸಲಾಗಿದೆ.
13 ವಯಸ್ಸಿನ ಅಪ್ರಾಪ್ತ ಬಾಲಕಿಯು ಆರೋಪಿ ಸುಧೀರ್ನ ಮನೆಗೆ ರಜಾ ದಿನಗಳಲ್ಲಿ ಹಾಗೆಯೇ ಇತರ ದಿನಗಳಲ್ಲಿ ಟಿ.ವಿ. ನೋಡಲು ಬರುತ್ತಿದ್ದಳು. ಕೆಲವೊಂದು ಬಾರಿ ಸುಧೀರ್ ಮಾತ್ರ ಮನೆಯಲ್ಲಿರುತ್ತಿದ್ದ. ಹಾಗೆಯೇ 2021ನೇ ಡಿಸೆಂಬರ್ ನಲ್ಲಿ ಆರೋಪಿ ಮಾತ್ರ ಇದ್ದಾಗ ಬಾಲಕಿ ಟಿವಿ ನೋಡಲು ಬಂದಿದ್ದ ವೇಳೆ ಅಂಗಡಿಗೆ ಹೋಗಿ ಬರೋಣವೆಂದು ಹೇಳಿ, ಅಂಗಡಿಗೆ ಕರೆದುಕೊಂಡು ಹೋಗದೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸುಧೀರ್ನ ಸಂಬಂಧಿಯ ವಾಸವಿಲ್ಲದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಈ ವಿಚಾರವನ್ನು ತಾಯಿಗೆ ಹೇಳುತ್ತೇನೆ ಎಂದು ಬಾಲಕಿ ಹೇಳಿದಾಗ ತಾಯಿಗೆ ಹೇಳಿದರೆ ನೀನೆ ನನ್ನ ಬಳಿ ಬಂದದ್ದು ಎಂದು ಹೇಳಿ ಪೊಲೀಸ್ ದೂರು ನೀಡುತ್ತೇನೆ ಎಂದು ಹೇಳಿ ಹೆದರಿಸಿದ್ದ. ಅನಂತರದ ದಿನಗಳಲ್ಲೂ ಬಾಲಕಿ ಆತನ ಮನೆಗೆ ಟಿ.ವಿ. ನೋಡಲು ಹೋದಾಗ ಅತ್ಯಾಚಾರವೆಸಗಿದ್ದ. ಜೊತಗೆ ಆತನ ಸಂಬಂಧಿ ಮನೆಯಲ್ಲಿಯೂ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಬಾಲಕಿಯು 2022 ಆಗಸ್ಟ್ ತಿಂಗಳ ಬಳಿಕ ಗರ್ಭಿಣಿಯಾದ ವಿಷಯ ಬೆಳಕಿಗೆ ಬಂದಿದೆ.
ತದ ನಂತರ ಆರೋಪಿ ಮತ್ತು ಇತರರು ಸೇರಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುವುದಾಗಿ ಯೋಜನೆ ರೂಪಿಸಿದ್ದರು. ಮದುವೆ ಆಗಿದ್ದು ಗಂಡ-ಹೆoಡತಿ ಎಂದು ಆಸ್ಪತ್ರೆಯವರಿಗೆ ನಂಬಿಸಲು ಆಕೆಗೆ ಕಾಲುಂಗುರ, ಬೆಳ್ಳಿಯ ಕರಿಮಣಿ ಸರ ಹಾಕಿಸಿ ಮದುಮಗಳಂತೆ ಅಲಂಕರಿಸಿ ಆತನನೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಾಲಕಿಯ ಮನೆಗೆ ತೆರಳಿ ಆಕೆಯ ತಾಯಿಯ ಬಳಿಯಲ್ಲಿ ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲು ಇದೆ ಎಂದು ಹೇಳಿ ಸಂತ್ರಸ್ಥ ಬಾಲಕಿಯನ್ನು ಸುಧೀರ್ ಮತ್ತು ಇತರರು 2022ರ ಡಿ. 17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದಾನೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ಸತ್ಯನಾರಾಯಣ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಚಾರ್ಜ್ ಶೀಟ್ ಅನ್ನು ಕೋರ್ಟ್ ಗೆ ಸಲ್ಲಿಸಿದ್ದರು. ಸದ್ಯ ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.