ಪಡುಬಿದ್ರಿಯಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೂಟದ ಉದ್ಘಾಟನೆ
ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ಭಾರತ: ನವೀನ್ ಚಂದ್ರ ಜೆ. ಶೆಟ್ಟಿ
ಎಲ್ಲಾ ಜಾತಿ ಮತ ಧರ್ಮಗಳನ್ನು ಮೀರಿ ನಡೆಯುವುದೇ ಕ್ರಿಕೆಟ್, ಇಲ್ಲಿ ನೀನು ಯಾವ ಜಾತಿ ಯಾವ ಧರ್ಮ ಎಂಬ ಕಟ್ಟು ಪಾಡುಗಳಿಲ್ಲ ಕೇವಲ ಆತನ ಇಲ್ಲವೇ ಆಕೆಯ ಪ್ರತಿಭೆಗೆ ತಕ್ಕ ಮನ್ನಣೆ, ಎಲ್ಲರೂ ಸೋದರತ್ವದಲ್ಲಿ ಬೆರೆಯಲು ಸಾಧ್ಯವಾಗುವುದು ಕೇವಲ ಕ್ರಿಕೆಟ್ ನಲ್ಲಿ ಮಾತ್ರ ಸಾಧ್ಯ ಎಂಬುದಾಗಿ ನವೀನ್ ಚಂದ್ರ ಜೆ.ಶೆಟ್ಟಿ ಹೇಳಿದ್ದಾರೆ.
ಅವರು ಪಡುಬಿದ್ರಿಯ ಕಡಲ ಫಿಶ್ ಸಂಸ್ಥೆಯ ಆಶ್ರಯದಲ್ಲಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಹಗಲು-ರಾತ್ರಿಯಾಗಿ “ಕಡಲ ಫಿಶ್” ಟ್ರೋಫಿಗಾಗಿ ನಡೆಯುವ ಅಂತರ್ ರಾಷ್ಟ್ರೀಯ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನೆಯ ಬಳಿಕ ಭಾರತ- ಶ್ರೀಲಂಕಾ ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆದಿದ್ದು, ಆ ಪಂದ್ಯವನ್ನು ಶ್ರೀಲಂಕಾ ತಂಡ ಜಯಿಸಿದೆ.
ಒಟ್ಟು ಈ ಪಂದ್ಯಾಕೂಟದಲ್ಲಿ ಶ್ರೀಲಂಕಾ ಸಹಿತ ರಾಜ್ಯದ ಒಟ್ಟು ಹದಿನೈದು ತಂಡಗಳು ಪಾಲ್ಗೊಂಡಿದ್ದವು.
ಇದೇ ಸಂದರ್ಭ ಇತ್ತೀಚೆಗಷ್ಟೇ ಅಪಘಾತವೊಂದರಲ್ಲಿ ಮೃತಪಟ್ಟ ಕ್ರಿಕೆಟ್ ಪಟ್ಟು ದೀಪೇಶ್ ದೇವಾಡಿಗರ ಆತ್ಮಕ್ಕೆ ಚಿರಶಾಂತಿಕೋರಿ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ಶ್ರೀಲಂಕಾ ತಂಡವನ್ನು ಕೊಂಬು, ಚೆಂಡೆ ವಾದನ ಸಹಿತ ಹುಲಿವೇಷಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಸಂಘಟಕ ಕಡಲ ಫಿಶ್ ಸಂಸ್ಥೆಯ ಅಧ್ಯಕ್ಷ ಚೇತನ್ ಪಡುಬಿದ್ರಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಸಂತೋಷ್ ಶೆಟ್ಟಿ ಪಲ್ಲವಿ, ವಿಶ್ವಾಸ್ ಅಮೀನ್, ನವೀನ್ ಎನ್. ಶೆಟ್ಟಿ,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಆರ್. ಹೆಗ್ಡೆ, ಶರತ್ ಶೆಟ್ಟಿ, ಲೋಕೇಶ್ ಕೋಡಿಕರೆ, ಕರುಣಾಕರ್ ಪೂಜಾರಿ, ವೈ, ಸುಕುಮಾರ್, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಶಶಿಕಲಾ ಪೂಜಾರಿ, ಅಶ್ವಿನ್ ಕೋಟ್ಯಾನ್, ರಚನ್ ಸಾಲ್ಯಾನ್, ಪುರಂದರ್, ರಮೀಜ್ ಹುಸೇನ್ ಮುಂತಾದವರಿದ್ದರು.