ತೆಂಗಿನ ಮರದಿಂದ ಮನೆಯ ಗೇಟಿನ ಸರಳಿನ ಮೇಲೆ ಬಿದ್ದ ವ್ಯಕ್ತಿ
ಕಾಯಿ ಕೀಳಳೆಂದು ತೆಂಗಿನ ಮರವೇರಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಮರದಿಂದ ಗೇಟಿನ ಸರಳಿಗೆ ಬಿದ್ದು ಕಾಲು ಸಿಲುಕಿಕೊಂಡ ಘಟನೆ
ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ಸಂಭವಿಸಿದೆ. ಮಣಿಪಾಲದ ಮಂಜೇಗೌಡ (36) ಗಾಯಗೊಂಡವರು.ಮಂಜೇಗೌಡ ಅವರು ಕಾಯಿ ಕೀಳುತ್ತಿದ್ದಾಗ ಮೇಲಿನಿಂದ ಸೀದಾ ಕೆಳಗಿದ್ದ ಕಾಂಪೌಂಡ್‌ನ ಗೇಟ್‌ನ ಸರಳಿಗೆ ಬಿದ್ದಿದ್ದಾರೆ. ಈ ವೇಳೆ ಅವರ ಕಾಲಿನೊಳಗೆ ಸರಳು ಸಿಲುಕಿಕೊಂಡಿತ್ತು. ಕೂಡಲೇ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಯಂತ್ರದ ಸಹಾಯದಿಂದ ಸರಳುಗಳನ್ನು ಬೇರ್ಪಡಿಸಿದ್ದಾರೆ. ಅನಂತರ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಸಹಾಯಕ ಅಗ್ನಿಶಾಮಕ ಅಧಿಕಾರಿ ರವೀಂದ್ರ, ಚಾಲಕ ಆಲ್ವಿನ್, ಪ್ರಮುಖರಾದ ರಾಘವೇಂದ್ರ, ಸುಭಾಷ್, ವಿನಾಯಕ, ಮಹಾಂತೇಶ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು.