ಪಡುಬಿದ್ರಿ ಗ್ರಾ.ಪಂ.ನ ವಿದ್ಯುತ್ ಸಂಪರ್ಕ ಕಟ್
ಗ್ರಾ.ಪಂ. ಹೋರಾಟಕ್ಕೆ ಮಂಡಿಯೂರಿ ತಪ್ಪೊಪ್ಪಿಕೊಂಡ ಮೆಸ್ಕಾಂ
ಸುಮಾರು ಹದಿನೈದು ಲಕ್ಷ ರೂಪಾಯಿ ಮೆಸ್ಕಾಂ ನ ವಿದ್ಯುತ್ ಬಿಲ್ಲ್ ಉಳಿಸಿಕೊಂಡಿದ್ದ ಪಡುಬಿದ್ರಿ ಗ್ರಾ.ಪಂ.ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕ್ರಮದ ವಿರುದ಼್ ಆಕ್ರೋಶಗೊಂಡ ಗ್ರಾ.ಪಂ. ಜನಪ್ರತಿನಿಧಿಗಳು ನಡೆಸಿದ ಪ್ರತಿಭಟನೆಗೆ ಬೆದರಿದ ಮೆಸ್ಕಾಂ ಮಂಡಿಯೂರಿ ತಪ್ಪೊಪ್ಪಿಕೊಂಡು ಯಾವುದೇ ಸವಾಲುಗಳಿಲ್ಲದೆ ಮತ್ತೆ ವಿದ್ಯುತ್ ಸಂಪರ್ಕ ನೀಡಿದೆ.
ಪಡುಬಿದ್ರಿ ಗ್ರಾ.ಪಂ.ನ ಇತಿಹಾಸದಲ್ಲೇ ಪ್ರಪ್ರಥಮ ಎಂಬಂತೆ ದಾರಿದೀಪ ಹಾಗೂ ನೀರಿನ ಸರಬರಾಜಿಗಾಗಿ ವೆಯ ಮಾಡಲಾದ ವಿದ್ಯುತ್ತಿನ ಸುಮಾರು ಹದಿನೇಳು ಲಕ್ಷ ರೂಪಾಯಿ ಬಾಕಿ ಇದ್ದು, ಕಳೆದ ಕೆಲ ದಿನಗಳ ಹಿಂದೆ ಎರಡು ಲಕ್ಷ ರೂಪಾಯಿ ನೀಡಲಾಗಿತ್ತು. ಉಳಿದ ಹದಿನೈದು ಲಕ್ಷ ರೂಪಾಯಿ ಪಾವತಿಸಲು ಒಂದು ತಿಂಗಳ ಕಾಲಾವಕಾಶ ಕೂಡಾ ಗ್ರಾ.ಪಂ. ಕೇಳಿತ್ತು. ಆದರೆ ಇದೀಗ ಏಕಾಏಕಿ ಗ್ರಾ.ಪಂ.ಅಧ್ಯಕ್ಷರಾಗಲೀ..ಪಿಡಿಓ ಆಗಲಿ ಇಲ್ಲದ ವೇಳೆ ಪಡುಬಿದ್ರಿ ಮೆಸ್ಕಾಂ ಶಾಖಾಧಿಕಾರಿ ಪ್ರೀತಂ ನಾಯಕ್ ಸೂಚನೆಯಂತೆ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.
ವಿಚಾರ ತಿಳಿದ ಗ್ರಾ.ಪಂ.ಅಧ್ಯಕ್ಷೆ ಶಶಿಕಲ ಹಾಗೂ ಕೆಲ ಸದಸ್ಯರು ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕಾರಣರಾದ ಶಾಖಾಧಿಕಾರಿ ಪ್ರೀತಂ ಹಾಗೂ ಹಿರಿಯ ಸಹಾಯಕಿ ಚಂದ್ರಿಕಾ ದೀಕ್ಷೀತ್ ಅವರನ್ನು ತರಾಟೆಗೆ ತೆಗೆದುಕೊಂಡು ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ಒಂದು ಹಂತದಲ್ಲಿ ಶಾಖಾಧಿಕಾರಿಯನ್ನು ಇಲ್ಲಿಂದ ಎತ್ತಂಗಡಿ ಮಾಡಲು ಹೋರಾಟಗಾರರು ಒತ್ತಾಯಿಸಿದರು.
ಮುಂಜಾವಿನಿಂದ ಸಂಜೆಯ ವರೆಗೂ ಪ್ರತಿಭಟನೆ ನಡೆಸಿದರೂ ಬಿಲ್ಲ್ ಪಾವತಿಸದ ಹೊರತು ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲ ಇದಕ್ಕೆ ಮೇಲಾಧಿಕಾರಿಗಳ ಆದೇಶ ಇದೆ ಎಂಬುದಾಗಿ ಶಾಖಾಧಿಕಾರಿ ಸಹಿತ ಕಾಪು ಇಒ ಕೈ ಚೆಲ್ಲಿ ಕುಳಿತ್ತಿದ್ದು, ಅಂತಿಮವಾಗಿ ಅಹೋರಾತ್ರಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ ಗ್ರಾ.ಪಂ. ಪ್ರತಿನಿಧಿಗಳು ಕೆಲಸ ಮುಗಿಸಿ ಮರಳಲು ಮುಂದಾದ ಮೆಸ್ಕಾಂ ಸಿಬ್ಬಂದಿಗಳನ್ನು ಹೊರ ಬರಲು ಬಿಡದೆ ತಡೆದಾಗ ..ಪ್ರತಿಭಟನೆಯ ಕಿಚ್ಚನ್ನು ಅರಿತ ಮೇಲಾಧಿಕಾರಿಗಳು ಗ್ರಾಪಂಗೆ ಯಾವುದೇ ನಿರ್ದೇಶನ ನೀಡದೆ, ಪ್ರತಿಭಟನಾಗಾರರ ಒತ್ತಾಯದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಸಿಬ್ಬಂದಿ ಹಾಗೂ ಸೂಚನೆ ನೀಡಿದ ಶಾಖಾಧಿಕಾರಿ ಮರು ಗ್ರಾ.ಪಂ.ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸೋಲೋಪ್ಪಿಕೊಂಡು ಶರಣಾಗಿದ