ವಿನಯ ಕುಮಾರ್ ಸೊರಕೆ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ
ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಉಡುಪಿ ವರದಿ
ಯಾರೊ ದುಷ್ಕರ್ಮಿಗಳು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಹೆಸರು ಬಳಕೆ ಮಾಡಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಹಣ ಕೇಳುವ ಇಲ್ಲವೇ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಸಿದ ಬಗ್ಗೆ ಇದೀಗ ಬೆಳಕಿಗೆ ಬಂದಿದೆ.
ಸೊರಕೆ ಹೆಸರಲ್ಲಿ ಖಾತೆ ತೆರೆದು ಫ್ರೇಂಡ್ಸ್ ರಿಕ್ವೆಸ್ಟ್ ಕಳುಹಿಸಿ, ಅದನ್ನು ಸ್ವೀಕರಿಸಿದ ಬಳಿಕ ನನ್ನ ಗೆಳೆಯ ಸಿಆರ್ ಫ್ ಅಧಿಕಾರಿ ಸಂತೋಷ್ ಕುಮಾರ್ ಅವರಿಗೆ ವರ್ಗಾವಣೆಯಾಗಿದೆ. ಅವರ ಮನೆ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದ್ದು ಅವರ ಮನೆಯ ಬೆಳೆಬಾಳುವ ವಸ್ತುಗಳು ಕಡಿಮೆ ಬೆಲೆಗೆ ನೀಡಲಾಗುತ್ತಿದ್ದು, ಇದನ್ನು ನೀವು ಕರೀದಿ ಮಾಡ ಬಹುದೆಂಬುದಾಗಿ ಮ್ಯಾಸೇಜ್ ಕಳುಹಿಸಲಾಗಿದೆ.
ದುಷ್ಕರ್ಮಿಗಳ ಈ ಸಂಚು ತಿಳಿಯುತ್ತಲೇ ಸೊರಕೆಯವರು, ಫೇಸ್ ಬುಕ್ ನಲ್ಲಿ ತೆರೆದಿರುವ ಖಾತೆ ನಕಲಿ ಎಂಬುದಾಗಿ ಫೋಷಿಸಿದ್ದು, ಈ ಬಗ್ಗೆ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಉಡುಪಿ ಸೆನ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಸೊರಕೆ ನನ್ನ ಹೆಸರಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ ಜನರೊಂದಿಗೆ ಸಂಪರ್ಕಕ್ಕೆ ಬರುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಈ ಖಾತೆಯಿಂದ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯೆ ನೀಡ ಬೇಡಿ, ಅಥವಾ ಸಂಪರ್ಕಿಸುವ ಪ್ರಯತ್ನ ಮಾಡಬೇಡಿ ಎಂಬುದಾಗಿ ಸೊರಕೆ ವಿನಂತಿಸಿದ್ದಾರೆ.