ವಿಧಾನ ಪರಿಷತ್ ಕಲಾಪದಲ್ಲಿ ಚುರುಕಾದ ಕರಾವಳಿ ಶಾಸಕ ಐವನ್
ವಿಧಾನ ಪರಿಷತ್ತಿನ ಶಾಸಕ ಐವನ್ ಡಿ ಸೋಜಾ ಬೆಳಗಾವಿ ಸುವಣ೯ ಸೌಧದಲ್ಲಿ ವಿಧಾನ ಪರಿಷತ್ತಿನ ಕಲಾಪದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯಾಗಿ ರಚಿಸಬೇಕು ಮತ್ತು ರೂ.250 ಕೋಟಿ ಪ್ರತಿ ವರ್ಷ ನೀಡುತ್ತೇವೆ ಎಂದು ಮಾನ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ.ಸುಧಾಕರ್ ರವರು ಕಲಾಪದಲ್ಲಿ ಭರವಸೆ ನೀಡಿದ್ದಾರೆ.
ಕರಾವಳಿ ಪ್ರಾಧಿಕಾರ ಮಂಡಳಿಯಾಗಿ ಮಾರ್ಪಡಿಸಲಾಗಿದ್ದು ಶಾಸಕರುಗಳು ಈ ಮಂಡಳಿಯ ಸದಸ್ಯರಾಗಿರುತ್ತಾರೆ. ಪ್ರತಿ ವರ್ಷ ರೂ. 250 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿಯಲ್ಲಿ ರೂ.225 ಕೋಟಿಗಳಿಗಿಂತಲೂ ಅವ್ಯವಹಾರ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ, ಕೇಸು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. 180 ಕಿ.ಮೀ ನ ಕರಾವಳಿ ಅಭಿವೃದ್ಧಿಯನ್ನು ಕೂಡಲೇ ಸಭೆಗೆ ಕರೆದು ಚರ್ಚಿಸುವುದಾಗಿ ತಿಳಿಸಿದರು.