ರಸ್ತೆಗಂಟಿಕೊಂಡು ವ್ಯಾಪಾರ ನಡೆಸಿದರೆ ಕಠಿಣ ಕಾನೂನು ಕ್ರಮ: ಪಡುಬಿದ್ರಿ ಗ್ರಾ.ಪಂ.ಪಿಡಿಒ ವ್ಯಾಪಾರಿಗಳಿಗೆ ಎಚ್ಚರಿಕೆ
ಪಡುಬಿದ್ರಿ ಮುಖ್ಯ ಮಾರುಕಟ್ಟೆ ರಸ್ತೆಯನ್ನು ಆಕ್ರಮಿಸಿಕೊಂಡು ಕೆಲ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯಾವುದೇ ವ್ಯಾಪಾರಿಗಳು ರಸ್ತೆಯನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸಿದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅವರ ವ್ಯಾಪಾರ ಪರವಾನಗೆ ರದ್ದು ಪಡಿಸುವುದಾಗಿ ಪಡುಬಿದ್ರಿ ಗ್ರಾ.ಪಂ. ಪಿಡಿಒ ಮಂಜುನಾಥ್ ಶೆಟ್ಟಿ ಎಚ್ಚರಿಸಿದ್ದಾರೆ.
ಅವರು ಪಂಚಾಯತಿ ಅಂಗಡಿ ಕೋಣೆಗಳ ಬಾಡಿಗೆ ಉಳಿಸಿಕೊಂಡಿರವವರಿಂದ ಬಾಡಿಗೆ ವಸೂಲಿ ನಡೆಸಿ, ರಸ್ತೆಗಂಟಿ ವ್ಯಾಪಾರ ನಡೆಸುವವರ ವಿರುದ್ಧ ಮಾತನಾಡಿದರು, ಗ್ರಾ.ಪಂ.ನ ಸ್ಥಳದಲ್ಲಿ ಸುಂಕ ನೀಡಿ ವ್ಯಾಪಾರ ನಡೆಸುತ್ತಿರುವವರು, ತಮಗೆ ನೀಡಿದ ಸ್ಥಳವನ್ನು ಹಿಂದೆ ಬಿಟ್ಟು ಡ್ರೈನೇಜ್ ದಾಟಿ ರಸ್ತೆಯಲ್ಲಿ ವ್ಯಾಪಾರ ನಡೆಸುವ ಮೂಲಕ ಪಾದಚಾರಿಗಳು ಸಹಿತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದಾಡಲೂ ಸಮಸ್ಯೆಯಾಗಿದೆ. ಈ ಬಗ್ಗೆ ಬಹಳಷ್ಟು ಬಾರಿ ಎಚ್ಚರಿಕೆ ನೀಡಿದರೂ ಸ್ಪಂದಿಸ ಕಾರಣ ಇದೀಗ ಅಂತಿಮ ಎಚ್ಚರಿಕೆ ನೀಡಲಾಗಿದ್ದು, ಮುಂದೆ ಇದು ಪುನರಾವರ್ತಣೆ ಆದಲ್ಲಿ ನೋಟಿಸು ನೀಡಿ ಶಾಶ್ವತವಾಗಿ ಅಂಗಡಿ ಮುಚ್ಚಿಸುವ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಶಾಲಾ ಕಾಲೇಜು, ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಅಂಚೆ ಕಛೇರಿ, ದೂರವಾಣಿ ಕೇಂದ್ರ ಸಹಿತ ಅನೇಕ ಧಾರ್ಮಿಕ ಕೇಂದ್ರಗಳ ಸಂಪರ್ಕ ರಸ್ತೆ ಇದ್ದಾಗಿದ್ದು, ಜನ ನಿತ್ಯ ಸಮಸ್ಯೆ ಅನುಭವಿಸುವಂತ್ತಾಗಿದೆ. ಮುಂದಿನ ದಿನದಲ್ಲಿ ಆಕ್ರಮಿಸಿಕೊಂಡು ಕಟ್ಟಿದ ತಾತ್ಕಾಲಿಕ ಶೆಡ್ಡುಗಳನ್ನು ವ್ಯಾಪಾರಿಗಳೇ ತೆರವುಗೊಳಿಸ ದಿದ್ದಲ್ಲಿ ಗ್ರಾ.ಪಂ. ಕಾರ್ಯಚರಿಸಿ ತೆರವುಗೊಳಿಸಲಿದೆ ಎಂಬುದಾಗಿ ಪಿಡಿಒ ಎಚ್ಚರಿಸಿದ್ದಾರೆ.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಶಶಿಕಲ, ಉಪಾಧ್ಯಕ್ಷ ಹೇಮಚಂದ್ರ, ಮಾಜಿ ಅಧ್ಯಕ್ಷ ರವಿ ಶೆಟ್ಟಿ ಸದಸ್ಯರಾದ ಅಶೋಕ್ ಪೂಜಾರಿ, ನಿಯಾಜ್, ಗ್ರಾ.ಪಂ.ಕಾರ್ಯದರ್ಶಿ ರೂಪ, ಸಿಬ್ಬಂದಿ ವಿಜಯ್ ಮುಂತಾದವರಿದ್ದರು.