“ಯನ್ಸ್ “ಟ್ರೋಫಿ-2024 ಶ್ರೀ ಗುರು ಎರ್ಮಾಳು ತಂಡಕ್ಕೆ
ಪಡುಬಿದ್ರಿ ವರದಿ
ಹಳೆಯಂಗಡಿಯ ಟಾರ್ಪಟೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಯನ್ಸ್ ಟ್ರೋಫಿಗಾಗಿ ಎಂಟು ತಂಡಗಳ ನಡುವೆ ನಡೆದ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದಲ್ಲಿ ಅಂತಿಮವಾಗಿ ದೀಪಕ್ ಶೆಟ್ಟಿ ನೇತೃತ್ವದ ಪಾದೆಬೆಟ್ಟು ವಿಷ್ಣುಮೂರ್ತಿ ತಂಡವನ್ನು ಸೋಲಿಸುವ ಮೂಲಕ ಪ್ರವೀಣ್ ಎರ್ಮಾಳು ನೇತ್ರತ್ವದ ಶ್ರೀ ಗುರು ಎರ್ಮಾಳು ತಂಡ ನಗದಿನೊಂದಿಗೆ “ಯನ್ಸ್” ಟ್ರೋಫಿ ಜಯಿಸಿದೆ.
ವಿಷ್ಣುಮೂರ್ತಿ ಪಾದೆಬೆಟ್ಟು ತಂಡ ನಗದಿನೊಂದಿಗೆ ದ್ವಿತೀಯ ಪ್ರಶಸ್ತಿ ಪಡೆಯಿತು.
ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಶ್ರೀಗುರು ತಂಡದ ನಿರುಪಮ್ ಪಡೆದರೆ, ಉತ್ತಮ ಆಲ್ ರೌಂಡರ್ ಪ್ರಶಸ್ತಿಯನ್ನು ವಿಷ್ಣುಮೂರ್ತಿ ಪಾದೆಬೆಟ್ಟು ತಂಡದ ದೀಪಕ್ ಶೆಟ್ಟಿ ಪಡೆದರು, ಒಂದು ಹಂತದಲ್ಲಿ ಪಂದ್ಯಾಕೂಟದಲ್ಲೇ ಹೊರ ಬೀಳಲ್ಲಿದ್ದ ತಂಡವನ್ನು ಪ್ರಶಸ್ತಿ ಸುತ್ತಿಗೆ ತರುವಲ್ಲಿ ಮುಖ್ಯ ಪಾತ್ರವಹಿಸಿದ್ದ ಶ್ರೀ ಗುರು ತಂಡದ ಸುನೀಲ್ ಶೆಟ್ಟಿಯವರಿಗೆ ಗೇಮ್ ಚೇಂಜರ್ ಪ್ರಶಸ್ತಿ ಅರ್ಹವಾಗಿಯೇ ಒಲಿದಿದೆ.
ಸಮರೋಪ ಸಮಾರಂಭದ ವೇದಿಕೆಯಲ್ಲಿ ಸಂಘಟಕರಾದ ಕೃಷ್ಣ ಬಂಗೇರ, ಪದ್ಮನಾಭ ಕಂಚಿನಡ್ಕ, ಪತ್ರಕರ್ತ ಸುರೇಶ್ ಎರ್ಮಾಳ್, ಸುನೀಲ್ ಶೆಟ್ಟಿ, ಕೌಶರ್, ಶ್ರೀಕಾಂತ್ ಶೆಣೈ, ಸುಜೀತ್ ಕಂಚಿನಡ್ಕ ಮತ್ತಿತರರಿದ್ದರು.