ಮೃತರ ಕುಟುಂಬದ ಸುಖ ದುಃಖಗಳಲ್ಲಿ ಬಾಗಿಯಾಗುವುದೇ, ಮೃತರಿಗೆ ನೀಡುವ ಶೃದ್ಧಾಂಜಲಿ
ಮಹೇಶ್ ಉಚ್ವಿಲರ ಶೃದ್ಧಾಂಜಲಿ ಸಂಭೆಯಲ್ಲಿ ವಿಷ್ಣುಮೂರ್ತಿ ಉಪಾಧ್ಯಾಯ ಹೇಳಿಕೆ
ಉಚ್ಚಿಲ ವರದಿ
ಮನುಷ್ಯ ಹೇಗೆ ಹುಟ್ಟಿದ ಎಂಬುದು ಮುಖ್ಯವಲ್ಲ, ಆತ ಹೇಗೆ ಬದುಕಿದ ಎಂಬುದು ಮುಖ್ಯ, ಸಮಜೋಮುಖಿಯಾಗಿ ಬದುಕು ಸಾಗಿಸಿದ ಮಹೇಶ್ ಉಚ್ವಿಲ ಹಿಂದೂ ಸಂಘಟನೆಗಳ ಮೂಲಕ ಸಮಾಜ ಸೇವೆ ನಡೆಸುವ ಮೂಲಕ ಸಾರ್ಥಕ ಬದುಕು ಬದುಕಿದ್ದ, ಆದರೆ ಕಿರು ವಯಸ್ಸಿನಲ್ಲಿ ನಮ್ಮನಗಲಿದ ಮಹೇಶ್ ಉಚ್ಚಿಲ ಇವರ ಕುಟುಂಬ ವೇಧನೆ ಅನುಭವಿಸುತ್ತಿದ್ದು, ಅವರ ಕುಟುಂಬದೊಂದಿಗೆ ಅವರ ಸುಖ ದುಃಖದಲ್ಲಿ ಬಾಗಿಯಾಗುವುದೇ ಮೃತರಿಗೆ ನೀಡುವ ಶೃದಾಂಜಲಿ ಎಂಬುದಾಗಿ ಉಚ್ವಿಲ ಮಹಾಲಕ್ಷ್ಮೀ ದೇವಳದ ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ ಹೇಳಿದ್ದಾರೆ.
ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾದ ವಠಾರದಲ್ಲಿ ಮಹೇಶ್ ಉಚ್ಚಿಲ ರವರ ಅಭಿಮಾನಿ ಬಳಗ ಆಯೋಜಿಸಿದ ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಎಲ್ಲರೊಂದಿಗೆ ಸಾರ್ವಜನಿಕವಾಗಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭ ಹಿಂದೂ ಸಂಘಟನೆಯ ಮುಖಂಡ ಸುನೀಲ್ ಕೆ. ಆರ್ ನುಡಿ ನಮನ ಸಲ್ಲಿಸಿದರು, ಈ ವೇಳೆ ಸಂಘಟನೆಯ ಮುಖಂಡರಾದ ಸುರೇಶ್ ಹೆಜಮಾಡಿ, ಕಿಶೋರ್ ಕುಂಜೂರು, ರಾಜೇಶ್ ಉಚ್ಚಿಲ, ಚಂದ್ರಶೇಖರ ಶೆಟ್ಟಿ ಉಚ್ವಿಲ, ಗುರುರಾಜ್ ಉಚ್ಚಿಲ, ವಸಂತ ದೇವಾಡಿಗ, ನಿತೇಶ್ ಎರ್ಮಾಳು, ಮನೋಜ್ ಶೆಟ್ಟಿ, ಸಚ್ಚಿನ್ ಶೆಟ್ಟಿ, ಪ್ರಸಾದ್ ಅಂಚನ್, ದಿವಾಕರ್ ಶೆಟ್ಟಿ ಉಚ್ಚಿಲ, ಗ್ರಾ.ಪಂ. ಸದಸ್ಯರಾದ ಪ್ರಸಾದ್ ಉಚ್ಚಿಲ, ಇಂದಿರಾ ಶೆಟ್ಟಿ, ನಿರ್ಮಲ ರಾಕೇಶ್ ಮುಂತಾದವರಿದ್ದರು