ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜೂರು
ಶಾಸಕ ಐವನ್ ಡಿಸೋಜ ಜನಪರ ಕಾಳಜಿ
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು ಆರು ಲಕ್ಷ ರೂಪಾಯಿ ಮಂಜೂರು ಮಾಡಿಸುವ ಮೂಲಕ ತನ್ನ ಜನಪರವಕಾಳಜಿಯನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.
ಪಾಲ್ಗುಣಿ ನದಿಯಲ್ಲಿ ಆಯಾ ತಪ್ಪಿ ಬಿದ್ದು ನೀರಿನಲ್ಲಿ ಮುಳಗಿ ಸಾವನಪ್ಪಿದ ಜೋಯಿಸನ್, ಸೂರಜ್.ಸಿ ಮತ್ತು ಲಾರೆನ್ಸ್ ಫೆರ್ನಾಂಡಿಸ್ ರವರ ಕುಟುಂಬಕ್ಕೆ ಹಾಗೂ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ ವಿನ್ಸೆಂಟ್ ಕುಟುಂಬಕ್ಕೆ ತಲಾ ರೂ.2 ಲಕ್ಷ ಯನ್ನು ಮಂಜೂರು ಮಾಡಿಸುವ ಮೂಲಕ ಶಾಸಕ ಐವನ್ ಆರು ಲಕ್ಷ ರೂಪಾಯಿ ಮಂಜೂರು ಮಾಡಿಸಿದಂತ್ತಾಗಿದೆ.