ಮೀರಾ ಟ್ರೋಫಿ ಒಶಿಯನ್ ವಾರಿಯರ್ಸ್ ಮಡಿಲಿಗೆ
ಪಡುಬಿದ್ರಿಯಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ
ಪಡುಬಿದ್ರಿ ವರದಿ
ಶ್ಮಾಶರ್ಸ್ ವೆಲ್ಫೇರ್ ಆಂಡ್ ಸ್ಫೋಟ್ಸ್ ಕ್ಲಬ್ ಆಯೋಜಿಸಿದ ಶಟಲ್ ಬ್ಯಾಡ್ಮಿಂಟನ್ ಮೀರಾ ಟ್ರೋಫಿ-2024ನ್ನು ಗೆಲ್ಲುವ ಮೂಲಕ ಸಿರಾಜ್ ಕನ್ನಂಗಾರು ಮಾಲಕತ್ವದ ಒಶಿಯನ್ ವಾರಿಯರ್ಸ್ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಪಡುಬಿದ್ರಿ ಬೇಂಗ್ರೆಯ ಬಯಲು ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯಾಕೂಟದಲ್ಲಿ ಆರು ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ಪೈನಲ್ ನಲ್ಲಿ ತೀವೃ ಪೈಪೋಟಿ ನೀಡಿ ವೀರೋಚಿತವಾಗಿ ಸೋಲುಂಡ ಕರಣ್ ತುಳಸಿ ನೇತ್ರತ್ವದ “ಟೀಂ ಉಚ್ಚಿಲ” ದ್ವಿತಿಯ ಸ್ಥಾನಿಯಾಗಿದೆ.
ಹೊನಲು ಬೆಳಕಿನಲ್ಲಿ ನಡೆದ ಈ ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಸುಮಾರು 50ಕ್ಕೂ ಅಧಿಕ ಕ್ರೀಡಾಪಟ್ಟುಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ರಿಯಾಜ್ ಮುದರಂಗಡಿ, ಸುಹಾನ್ ಪಾದೆಬೆಟ್ಟು, ಸುರೇಶ್ ಆಚಾರ್ಯ, ಸತೀಶ್ ಆಚಾರ್ಯ, ಪತ್ರಕರ್ತ ಸುರೇಶ್ ಎರ್ಮಾಳ್, ರಫೀಕ್ ಉಚ್ವಿಲ, ಅಶ್ರಫ್, ಸಂಸ್ಥೆಯ ಗೌರವ ಅಧ್ಯಕ್ಷ ಮಹಮ್ಮದ್ ಕೌಶರ್ ಪಡುಬಿದ್ರಿ, ಅಧ್ಯಕ್ಷ ರಮೀಜ್ ಹುಸೇನ್, ನಸ್ರುಲ್ಲಾ ಬೇಂಗ್ರೆ ಹಾಗೂ ರಫೀಪ್ ಉಚ್ಚಿಲ ಉಪಸ್ಥಿತರಿದ್ದರು.