ಕ್ರೈಂ

ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶ

ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಲಕ್ಷಾಂತರ ರೂ. ಮೌಲ್ಯದ ಸುಮಾರು 260ಕ್ಕೂ ಅಧಿಕ ಮದ್ಯದ ಬಾಕ್ಸ್‌ಗಳು ಪತ್ತೆಯಾಗಿವೆ. ಅಬಕಾರಿ ಅಧಿಕಾರಿಗಳು ಅದನ್ನು ಜಪ್ತಿ ಮಾಡಿ ಕಾರ್ಕಳ ಅಬಕಾರಿ ಇಲಾಖೆಯಲ್ಲಿ ದಾಸ್ತಾನಿರಿಸಿದ್ದಾರೆ. ಇವೆಲ್ಲವೂ ಬ್ರ್ಯಾಂಡೆಡ್‌ ಮದ್ಯಗಳಾದ ಜಾನಿ ವಾಕರ್‌, ಬ್ಲಾಕ್‌ ಲೇಬಲ್‌, ಬ್ಲ್ಯಾಕ್‌ ಆಂಡ್‌ ವೈಟ್‌, ಮ್ಯಾನ್ಶನ್‌ ಹೌಸ್ (MH), ಮ್ಯಾಕ್‌ಡ್ವೆಲ್‌ (MC), ಓಡ್ಕ ಲೇಬಲ್‌ನ ನಕಲಿ ಮದ್ಯವಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅಬಕಾರಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಮತ್ತು ನಕಲಿ ಮದ್ಯ ತಯಾರಿಕೆ, ರವಾನೆ‌ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ತಂಡ ತನಿಖೆ ನಡೆಸುತ್ತಿದೆ.

Leave a comment

Your email address will not be published. Required fields are marked *

You may also like

ಉಡುಪಿ ಕ್ರೈಂ

ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

  • September 26, 2024
Share this… Whatsapp Facebook Twitter ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೃಹತ್ ಟಿಪ್ಪರಲ್ಲಿ ಅಕ್ರಮ ಮರಳು ಪತ್ತೆಯಾಗಿದ್ದು ಪಡುಬಿದ್ರಿ ಪೊಲೀಸರು ಮರಳು ಸಹಿತ ಟಿಪ್ಪರನ್ನು
ಕ್ರೈಂ

ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ

  • November 12, 2024
Share this… Whatsapp Facebook Twitter ಪಡುಬಿದ್ರಿ ಠಾಣಾ ವ್ಯಾಪ್ತಿಯ ಎಲ್ಲೂರು ಸಮೀಪದ ಇರಂದಾಡಿ ಬಸ್ ತಂಗುದಾಣದ ಹಿಂಭಾಗದಲ್ಲಿ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು