ಬಾರೀ ಮಳೆಗೆ ಅಪಾಯದಂಚಿನಲ್ಲಿ ಮನೆ, ತಕ್ಷಣ ದುರಸ್ಥಿಗೆ ಐವನ್ ಸೂಚನೆ
ಮಂಗಳೂರು ವರದಿ
ಸುರಿದ ಬಾರೀ ಮಳೆಗೆ ಮನೆಯ ಅಂಗಣ ಕುಸಿದು ಮನೆ ಅಪಾಯದಂಚಿನಲ್ಲಿದ್ದ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಐವನ್ ಡಿಸೋಜ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸುರಿದ ಬಾರೀ ಮಳೆಗೆ ಬಳ್ಳಾಲ್ ಬಾಗ್ ಉಮೇಶ್ ಎಂಬವರ ಮನೆಯ ಪಕ್ಕದ ನೀರು ಹರಿದು ಹೋಗುತ್ತಿದ್ದ ತೊರೆಯೊಂದು ತುಂಬಿ ಹರಿದ ಪರಿಣಾಮ ಮನೆಯ ಅಂಗಣ ಕುಸಿದಿದ್ದು, ಮನೆ ಅಪಾಯದಂಚಿನಲ್ಲಿವ ವಿಚಾರ ತಿಳಿದ ಶಾಸಕ ಐವನ್ ಡಿಸೋಜ ಉಮೇಶ್ ರವರ ಮನೆಗೆ ತೆರಳಿ ವೀಕ್ಷಣೆ ಮಾಡಿ ಅಪಾಯವರಿತ ಅವರು ತಕ್ಷಣವೇ ಅದನ್ನು ದುರಸ್ಥಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ.
ಈ ಸಂದರ್ಭ ಸ್ಥಳೀಯ ಕಾರ್ಯಕರ್ತರು ಅವರೊಂದಿಗಿದ್ದರು.