ಬಾಂಗ್ಲಾ ಅಕ್ರಮ ವಲಸಿಗರ ಜಾಲ- ಎನ್ ಐ ಎ ತನಿಖೆಗೆ ಯಶ್ ಪಾಲ್ ಸುವರ್ಣ ಪತ್ರ
ಮಲ್ಪೆಯಲ್ಲಿ 7 ಮಂದಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ ಎನ್ ಐ ಎ ಮೂಲಕ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ನೆಲೆಸಿರುವ ಬಗ್ಗೆ ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಕಂಡು ಬರುತ್ತಿದ್ದು, ಕರಾವಳಿ ಭಾಗದ ಜನತೆ ಇದರಿಂದ ತಲ್ಲಣ ಗೊಂಡಿದ್ದಾರೆ.
ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಬಂಧಿತ ಪ್ರಜೆಗಳು ಈಗಾಗಲೇ ನಕಲಿ ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಹೊಂದಿರುವುದು ತೀರ ಆತಂಕಕಾರಿ ಬೆಳವಣಿಗೆಯಾಗಿದೆ. ಅಕ್ರಮ ವಲಸಿಗರಿಗೆ ಸಹಕಾರ ನೀಡುವ ಜಾಲವೇ ಕರಾವಳಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಮಾನಿ ಇದ್ದು ಉನ್ನತ ಮಟ್ಟದ ತನಿಖೆ ಮಾಡಿ ದೇಶ ವಿರೋಧಿ ಮಾನಸಿಕತೆಯ ಜಾಲವನ್ನು ಪತ್ತೆಹಚ್ಚುವ ಅನಿವಾರ್ಯತೆ ಇದೆ.
ರಾಷ್ಟೀಯ ಭದ್ರತೆಗೆ ಧಕ್ಕೆತರುವ ದೇಶ ವಿರೋಧಿ ಚಟುವಟಿಕೆಗಳಿಗೆ ಸಹಕಾರ ನೀಡುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿಟ್ಟಿನಲ್ಲಿ ತಕ್ಷಣ ಎನ್ ಐ ಎ ಮೂಲಕ ತನಿಖೆ ನಡೆಸಿ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.