ಬಡ ಮಹಿಳೆಯ ಕುಟುಂಬಕ್ಕೆ ಆಧಾರವಾದ ಮಂಜಣ್ಣ ಸೇವಾ ಬ್ರಿಗ್ರೇಡ್
ಮಂಗಳೂರು ವರದಿ
200ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ 60ಲಕ್ಷಕ್ಕೂ ಅಧಿಕ ಮೊತ್ತದ ಸೇವಾ ಯೋಜನೆಯನ್ನು ಮಾಡಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ವತಿಯಿಂದ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು ಪೂರ್ವಬಾವಿಯಾಗಿ ಭೂಮಿ ಪೂಜೆ ನಡೆಯಿತು.
ಮಂಗಳೂರಿನ ತೀರ ಬಡ ಕುಟುಂಬದ ಪಡೀಲ್ ನಿವಾಸಿ ಸುನಿತಾ ಎಂಬವರಿಗೆ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮನೆ ಕೆಲಸ ಮಾಡುತ್ತಾ ಮಾನಸಿಕ ಸ್ಥಿತಿ ಸರಿಯಿಲ್ಲದ ಅಣ್ಣನ ಜೊತೆ ಬದುಕು ಕಳೆಯುತ್ತಿರುವ ಸುನಿತಾ ಅವರ ಪರಿಸ್ಥಿತಿ ತೀರ ಸಂಕಷ್ಡದಲ್ಲಿದೆ. ಇವರ ಕಷ್ಟ ನೋಡಿದ ಮನೋಜ್ ಅಳಪೆ ಭಟ್ರಬೆಟ್ಟು ಇವರು ಸದಾ ಸೇವೆಯಲ್ಲಿ ತೊಡಗಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಸಂಸ್ಥೆಗೆ ಮನವಿ ಮಾಡಿದ್ದಾರೆ. ತಕ್ಷಣ ಮನವಿಗೆ ಸ್ಪಂದಿಸಿದ ಸಂಸ್ಥೆ ಮಹಿಳೆಯ ಕಷ್ಟಕ್ಕೆ ಹೆಗಲು ನೀಡಲು ಮುಂದಾಗಿದೆ.
ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆರ್ಚಕ ಸುಬ್ರಹ್ಮಣ್ಯ ಐತಾಳ್ ರವರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ಸ್ಥಾಪಕಾಧ್ಯಕ್ಷರಾದ ಮನೋಜ್ ಕೋಡಿಕೆರೆ ಇವರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ್ದಾರೆ.
ಈ ವೇಳೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ಗರೋಡಿ, ವಾಮನ್ ಅಳಪೆ ಗರೋಡಿ ದೇವಸ್ಥಾನದ ಟ್ರಸ್ಟ್ ಸದಸ್ಯರು, ಚರಣ್ ಅಳಪೆ ಭಟ್ರಬೆಟ್ಟು, ಶೋಭಾ ಪೂಜಾರಿ ಕಾರ್ಪೊರೇಟರ್ ಅಳಪೆ ಭಟ್ರಬೆಟ್ಟು, ವಿಕ್ಕಿ ಪೂಜಾರಿ ಪಡೀಲ್, ಗೆಳೆಯರ ಬಳಗ ಸುರತ್ಕಲ್ ಇದರ ಸ್ಥಾಪಕಾಧ್ಯಕ್ಷರಾದ ನಾಗೇಶ್ ಪೂಜಾರಿ ತೋಕೂರು, ಮನೋಜ್ ಅಳಪೆ ಭಟ್ರಬೆಟ್ಟು ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್ ಇದರ ಅಧ್ಯಕ್ಷರು ರಂಜಿತ್ ಜೆ ಶೆಟ್ಟಿ, ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ತೋಕೂರು ಮುಂತಾದವರು ಉಪಸ್ಥಿತರಿದ್ದರು.