ಪಡುಬಿದ್ರಿ ಬೇಂಗ್ರೆ ಯುವಕ ನೇಣಿಗೆ ಶರಣು
ಸಾಲಬಾಧೆ ಭಾದಿಸಿತ್ತೇ..!
ಪಡುಬಿದ್ರಿಯ ಬೇಂಗ್ರೆ ನಿವಾಸಿಯೋರ್ವ ತನ್ನ ವಾಸದ ಮನೆಯ ಕೋಣೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ಹಿಂಡುವ ಘಟನೆಯೊಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಬೇಂಗ್ರೆ ಕ್ರಾಸ್ ಬಳಿಯ ಚ್ವಾಯ್ಸ್ ಅಜೀಜ್ ಎಂಬವರ ಪುತ್ರ ವಿವಾಹಿತ ನಸ್ರುಲ್ಲ(29), ಈತನಿಗೆ ಕಳೆದ ಸುಮಾರು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು ಎರಡುವರೆ ವರ್ಷದ ಒಂದು ಗಂಡು ಮಗುವಿದೆ. ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದ ಈತ ಕೆಲ ಸಮಯದ ಹಿಂದೆ ಊರಿಗೆ ಮರಳಿದ್ದು, ಊರಿಗೆ ಮರಳಿದಾತ ಅತೀ ಹೆಚ್ಚು ಸಮಯ ಮನೆಯಲ್ಲೇ ಕಳೆಯುತ್ತಿದ್ದ ಎನ್ನಲಾಗಿದೆ. ಮಸೀಯಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳಿದಾಗ. ಮನೆಗೆ ಬ್ಯಾಂಕಿನ ಸಾಲ ಬಾಕಿಯ ಪತ್ರವೊಂದು ಬಂದಿದ್ದು ಗಮನಿಸಿ ಆ ಬಳಿಕ ತೀವ್ರ ಖಿನ್ನತೆಗೆ ಒಳಗಾದ ಆತ ನನಗೆ ಹಣ ಬೇಕೆಂದವನೇ ಕೋಣೆಗೆ ಹೋಗಿ ಬಾಗಿಲು ಹಾಕಿ ಕೊಂಡಿದ್ದ, ಒಮ್ಮೆಲೇ ಸಿಟ್ಟುಗೊಳ್ಳುವ ಸ್ವಭಾವ ಅವನ್ನದ್ದಾಗಿದ್ದರಿಂದ, ಮನೆಯಲ್ಲಿದ್ದ ಪತ್ನಿ ಗಂಭೀರವಾಗಿ ಪರಿಗಣಿಸಿಲ್ಲ, ಹೊತ್ತಾದರೂ ಹೊರ ಬಾರದ್ದನ್ನು ಕಂಡ ಪತ್ನಿ ಬಾಗಿಲು ಬಡಿದ್ದಿದ್ದು, ಬಾಗಿಲು ತೆರೆಯದಾಗ ಬೊಬ್ಬೆ ಹಾಕಿದ್ದು ನೆರೆಮನೆಯ ಯುವಕನೊರ್ವ ಆಗಮಿಸಿ ಬಾಗಿಲ ಚಿಲಕ ಮುರಿದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಆತ ಪತ್ತೆಯಾಗಿದ್ದ.
ಮಸೀದಿಯಿಂದ ಮರಳುತ್ತಿದಾಗ ಮನೆಯಲ್ಲಿದ್ದ ಆ ಸಾಲದ ಪತ್ರವೇ ಈತನ ಈ ನಿರ್ಧಾರಕ್ಕೆ ಕಾರಣವಾಯಿತೆ..? ಈತ ಸಾಲ ಬಾಧೆಗೆ ಒಳಗಾಗಿ ತನ್ನ ಪತ್ನಿ ಸಹಿತ ಪುಟ್ಟ ಮಗುವನ್ನು ಅನಾಥರನ್ನಾಗಿ ಮರಳಿ ಬಾರದ ಲೋಕಕ್ಕೆ ಪ್ರಯಾಣಿಸಿದನೇ..ಎಲ್ಲಾ ಪ್ರಶ್ನೆಗಳಿಗೆ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪಡುಬಿದ್ರಿ ಪೊಲೀಸರ ತನಿಖೆಯಿಂದಲಷ್ಟೇ ಸತ್ಯ ವಿಚಾರ ಹೊರ ಬರ ಬೇಕಾಗಿದೆ.