ಪಡುಬಿದ್ರಿ ಬಂಟರ ಸಂಘ ಆಯೋಜನೆಯ ಕ್ರೀಡೋತ್ಸವ ಹೆಮ್ಮೆ ತಂದಿದೆ.
ಗ್ರಾಮ ದೇಗುಲ ಜೀರ್ಣೋದ್ಧಾರಕ್ಕೆ ಶ್ರಮಿಸ ಬೇಕಾಗಿದೆ: ಪ್ರಕಾಶ್ ಶೆಟ್ಟಿ
ಪಡುಬಿದ್ರಿ ವರದಿ
ಪಡುಬಿದ್ರಿ ಬಂಟರ ಸಂಘ ಆಯೋಜಿಸಿದ ಅಂತರ್ ರಾಜ್ಯ ಮಟ್ಟದ ಕ್ರೀಡೋತ್ಸವ ಹೆಮ್ಮೆ ತಂದಿದೆ. ಮುಂದೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಗಳಾಗಬೇಕಾಗಿದ್ದು ಗ್ರಾಮಸ್ಥರೆಲ್ಲಾರೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ನಮ್ಮ ಗ್ರಾಮ ದೇಗುಲ ಜೀರ್ಣೋದ್ಧಾರ ಕಾರ್ಯಕ್ಕೆ ಹೆಗಲು ಕೊಡಬೇಕಾಗಿದೆ ಎಂದು ಎಂಆರ್ ಜಿ ಗ್ರೂಪ್ ಉದ್ಯಮ ಸಂಸ್ಥೆಯ ಚೇರ್ಮೆನ್ ಹಾಗೂ ಆಡಳಿತ ನಿರ್ದೇಶಕ ಡಾ| ಪ್ರಕಾಶ ಕೆ. ಶೆಟ್ಟಿ ಹೇಳಿದ್ದಾರೆ.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ| ಮೋಹನ ಆಳ್ವ ತಮ್ಮ ಸಮಾರೋಪ ಭಾಷಣವನ್ನು ಗೈದು ಮಾತನಾಡಿ, ಬಂಟರಿಗೂ ಕ್ರೀಡೆಗೂ ಅವಿನಾಭಾವ ಸಂಬಂಧವಿದೆ. ನಮ್ಮಲ್ಲಿ ಅಪಾರ ಕ್ರೀಡಾ ಮನೋಭಾವವಿದೆ. ಸಾಮರಸ್ಯದ ಪ್ರತೀಕವಾಗಿ ಕ್ರೀಡಾ ಸಂಪನ್ಮೂಲವೂ ನಮ್ಮ ದೇಶದಲ್ಲಿದೆ. ಯುವಶಕ್ತಿ ನಮ್ಮಲ್ಲಿ ಅಪಾರವಿದೆ. ಆದರೂ ಒಲಿಂಪಿಕ್ಸ್ ನಲ್ಲಿ ಬಂಗಾರದ ಪದಕ ಗಳಿಸಲಾಗದ್ದಕ್ಕೆ ಅತ್ಮಾವಲೋಕನವಾಗಬೇಕು. ನಮ್ಮ ತುಳುನಾಡಿನ ಜನತೆ ಇದರ ಬಗೆಗೆ ಯೋಚಿಸಬೇಕು. ಕಂಬಳಗಳನ್ನು ಜಿಲ್ಲೆಯಲ್ಲಿ ಅದ್ಭುತವಾಗಿ ಸಂಘಟಿಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಪ್ರಯತ್ನಗಳನ್ನು ನಡೆಸಬೇಕು. ಆರೋಗ್ಯವಂತರಾಗಿ ದೇಶದ ಅನರ್ಘ್ಯ ರತ್ನಗಳಾಗಿರಿ ಎಂದು ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಂಟರ ಸಂಘವು ಜಾತ್ಯಾತೀತ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂಬುದನ್ನು ಎಂದರು.
ಉದ್ಯಮಿ ತೋನ್ಸೆ ಆನಂದ ಶೆಟ್ಟಿ,, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕುರ್ಕಿಲ್ ಬೆಟ್ಟು, ಸಾಯಿರಾಧಾ ಮನೋಹರ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಶೋಧನ್ ಶೆಟ್ಟಿ, ಸಮ್ಮಾನಿತರ ಪರವಾಗಿ ಎರ್ಮಾಳು ರೋಹಿತ್ ಹೆಗ್ಡೆ ಸಾಂಧರ್ಬಿಕವಾಗಿ ಮಾತನಾಡಿದರು.
ಎಂಎಲ್ ಲ್ಸಿಗಳಾದ ಕಿಶೋರ್ ಶೆಟ್ಟಿ, ಐವನ್ ಡಿಸೋಜ, ಭಾಗವತ ಪಟ್ಲ ಸತೀಶ್ ಶೆಟ್ಟಿ, ಮುಂಬಯಿ ಉದ್ಯಮಿ ತೋನ್ಸೆ ಆನಂದ ಶೆಟ್ಟಿ, ಉದ್ಯಮಿ ಕೆ. ಎಂ. ಶೆಟ್ಟಿ, ಎರ್ಮಾಳು ಶಶಿಧರ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಅದಾನಿ ಸಂಸ್ಥೆಯ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ, ಆಸ್ಪೆನ್ ಇನ್ಫ್ರಾ ಜಿಎಂ ಅಶೋಕ್ ಕುಮಾರ್ ಶೆಟ್ಟಿ, ಭಾಸ್ಕರ ಶೆಟ್ಟಿ ಯುಎಸ್ಎ, ಮನೋಹರ ಶೆಟ್ಟಿ ಸಾಯಿರಾಧಾ, ವೀಣಾ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಉಪೇಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಕುರ್ಕಿಲ್ ಬೆಟ್ಟು, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಸುರೇಶ್ ಶೆಟ್ಟಿ ಗುಂಡ್ಲಾಡಿ, ಹರಿಪ್ರಸಾದ್ ರೈ, ಬಾಲಚಂದ್ರ ಶೆಟ್ಟಿ ಎರ್ಮಾಳು ಪುಚ್ಚೊಟ್ಟುಬೀಡು, ಸೀತಾರಾಮ ಶೆಟ್ಟಿ ಎರ್ಮಾಳು ಪುಚ್ಚೊಟ್ಟುಬೀಡು, ರೋಹಿತ್ ಹೆಗ್ಡೆ ಎರ್ಮಾಳು, ನವೀನ್ ಚಂದ್ರ ಶೆಟ್ಟಿ ಡಾ| ರೋಶನ್ ಕುಮಾರ್ ಶೆಟ್ಟಿ, ರಿತೇಶ್ ಶೆಟ್ಟಿ ಸೂಡ, ಕ್ರೀಡಾ ಸಂಚಾಲಕ ವಿನಯ ಶೆಟ್ಟಿ, ಸಹ ಸಂಚಾಲಕಿ ಶರ್ಮಿಳಾ ಎಂ. ಶೆಟ್ಟಿ, ಕಾಂತಿ ಶೆಟ್ಟಿ ಮತ್ತಿತರರಿದ್ದರು.
ಬೆಂಗಳೂರಿನ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿ ಅವರನ್ನು ಹಾಗೂ ಮುಂಬಯಿ ಉದ್ಯಮಿ ತೋನ್ಸೆ ಆನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಎರ್ಮಾಳು ರೋಹಿತ್ ಹೆಗ್ಡೆ, ಕಂಬಳ ಕ್ಷೇತ್ರದ ಸಾಧನೆಗಾಗಿ ಬಾಲಚಂದ್ರ ಶೆಟ್ಟಿ ಎರ್ಮಾಳು ಪುಚ್ಚೊಟ್ಟು ಬೀಡು ಹಾಗೂ ಕು| ನೈಶಾ ಶೆಟ್ಟಿ ಅವರ ಕ್ರೀಡೆ ಕ್ಷೇತ್ರದ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಕ್ರೀಡಾರತ್ನ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು.
ಸ್ಥಳದಾನಿ ಕರುಣಾಕರ ಪೂಜಾರಿ, ಡಾ| ರೋಶನ್ ಕುಮಾರ್ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ಸೂಡ ಅವರನ್ನು ಸಮ್ಮಾನಿಸಲಾಯಿತು. ಭವಿಷ್ ಶೆಟ್ಟಿ ಅವರಿಗೆ ಪ್ರೋತ್ಸಾಹಕ ಸಹಾಯಧನವನ್ನೂ ವಿತರಿಸಲಾಯಿತು.
ಸಭಾಧ್ಯಕ್ಷತೆಯನ್ನು ವಹಿಸಿದ ಶಶಿಧರ ಶೆಟ್ಟಿ ಎರ್ಮಾಳು ಮಾತನಾಡಿದರು.
ಡಾ| ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ರವಿಶೆಟ್ಟಿ ಗುಂಡ್ಲಾಡಿ ವಂದಿಸಿದ್ದು,ಜಯ ಶೆಟ್ಟಿ ಪದ್ರ ಹಾಗೂ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿದರು.