ಪಡುಬಿದ್ರಿ ಪೊಲೀಸ್ ಠಾಣಾ ಮುಂಭಾಗದಲ್ಲೇ ಮೆಸ್ಕಾಂ ಬಳ್ಳಿತೇರು
ಪಡುಬಿದ್ರಿ ಪೊಲೀಸ್ ಠಾಣಾ ಮುಂಭಾಗ ಮೆಸ್ಕಾಂ ನಿರ್ಲಕ್ಷ್ಯಕ್ಕೆ ಸಾಕ್ಷೀ ಎಂಬಂತೆ ಸರ್ಕಾರಿ ಶಾಲಾ ಕಾಲೇಜುಗೆ ಅಂಟಿ ಕೊಂಡಿರುವ ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿಗೆ ಬಳ್ಳಿ ಸುತ್ತಿಕೊಂಡು ತೇರಿನ ಮಾದರಿಯಲ್ಲಿ ಗೊಚರಿಸಿ ಅಪಾಯವನ್ನು ಕೈ ಬೀಸಿ ಕರೆಯುತ್ತಿದ್ದರೂ ಇಲಾಖೆ ಮೌನವಾಗಿದೆ.
ಪಡುಬಿದ್ರಿಯ ಹೃದಯಭಾಗ ಮುಖ್ಯ ಮಾರುಕಟ್ಟೆ ರಸ್ತೆ, ಸರ್ಕಾರಿ ಪಬ್ಲಿಕ್ ಶಾಲಾ ಕಾಲೇಜು ಸಹಿತ ಸರ್ಕಾರಿ ಆಸ್ಪತ್ರೆ, ಅಂಚೆ ಕಛೇರಿ ಧಾರ್ಮಿಕ ಕ್ಷೇತ್ರಗಳನ್ನು ಸಂಧಿಸುವ ರಸ್ತೆಯಂಚಿನಲ್ಲೇ ಈ ಬಳ್ಳಿತೇರು ಬಹಳಷ್ಟು ದಿನಗಳಿಂದ ಅಪಾಯದ ಮುನ್ನುಸೂಚನೆ ನೀಡುತ್ತಿದೆ. ಹೃದಯ ಭಾಗದ ಸಮಸ್ಯೆಯನ್ನೇ ಬಗೆಹರಿಸಲಾಗದ ಮೆಸ್ಕಾಂ ಇನ್ನು ಒಳ ಪ್ರದೇಶದ ಸಮಸ್ಯೆಗಳನ್ನು ಪರಿಹಾರ ಮಾಡೀತೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಪಡುಬಿದ್ರಿ ಮೆಸ್ಕಾಂ ಕಛೇರಿ ಕೇವಲ ಗ್ರಾಹಕರಿಂದ ಬಿಲ್ಲ್ ಸಂಗ್ರಹ ಮಾಡಲಷ್ಟೇ ಶಕ್ತ, ಬಿಲ್ಲ್ ಪಾವತಿಸಲು ಒಂದೆರಡು ದಿನ ವಿಳಂಬವಾದರೆ ಸಂಪರ್ಕ ಕಡಿತಗೊಳಿಸಲು ಆದೇಶಿಸುವ ಪಡುಬಿದ್ರಿ ಕಛೇರಿಯ ಅಧಿಕಾರಿಗಳು ಗ್ರಾಹಕರ ಸಮಸ್ಯೆ ಬಗೆಯರಿಸುವತ್ತಲೂ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹ.