ತಂಡದಿಂದ ಕೊಲೆ ಬೆದರಿಕೆ, ಹಲ್ಲೆ, ಕಾರುಗಳಿಗೆ ಹಾನಿ
ಕಾಪು ಸೋನು ಸುಧೀರ್ ಮತ್ತು ಇತರರ ಮೇಲೆ ಪ್ರಕರಣ ದಾಖಲು
ಉಡುಪಿ ವರದಿ
ಕುತ್ಪಾಡಿ ಗ್ರಾಮದ ಉದ್ಯಾವರ ಶಿವಸಾಗರ್ ಹೋಟೆಲ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಕಾರೊಂದನ್ನು ಅಡ್ಡಗಟ್ಟಿದ ತಂಡವೊಂದು ಗೂಂಡಾಗಿರಿ ಪ್ರದರ್ಶಿಸಿ ಜೀವ ಬೆದರಿಕೆಯೊಡ್ಡಿದ್ದಲ್ಲದೆ, ಕಾರಿನ ಗಾಜು ಹೊಡೆದು ವಿಕೃತಿ ಮೆರೆದಿದ್ದಾರೆ ಎಂಬುದಾಗಿ ಉಡುಪಿ ನಗರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದ ಮೊಹಮ್ಮದ್ ಮುರಪಾಕ್ ಎಂಬವರು ಶಿವ ಸಾಗರ್ ಹೋಟೆಲ್ ಪಕ್ಕದ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ ಕಾರಿನಲ್ಲಿ ಹೊರಡಲು ಸಿದ್ದವಾಗುತ್ತಿದಂತೆ ರಾತ್ರಿ ಸುಮಾರು ಹತ್ತುವರೆ ಗಂಟೆಗೆ ಅಲ್ಲಿಗೆ ಬಂದ ತಂಡವೊಂದು ಆ ಕಾರನ್ನು ಅಡ್ಡಗಟ್ಟಿ ಬೈದು ಹಲ್ಲೆ ನಡೆಸಿದಲ್ಲದೆ ಕಡಾ ಚೈನ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಕಾರಿನ ಮುಂಭಾಗದ ಗಾಜು ಹಾಗೂ ಮತ್ತೊಂದು ಕಾರಿನ ಸೈಡ್ ಮಿರಾರ್ ಹೊಡೆದು ಸ್ಥಳದಿಂದ ತೆರಳಿದ್ದು, ಸ್ಥಳೀಯರ ಮಾಹಿತಿಯಂತೆ ಹಲ್ಲೆ ನಡೆಸಿದವರಲ್ಲಿ ಪ್ರಮುಖವಾಗಿ ಕಾಪು ಮೂಲದ ಸೋನು ಸುಧೀರ್ ಎಂದು ತಿಳಿದಿದೆ. ಉಡುಪಿ ನಗರ ಠಾಣೆಯಲ್ಲಿ ಸೋನು ಸುಧೀರ್ ಹಾಗೂ ಇತರರ ವಿರುದ್ಧ ಆಯಾನ್ ಪೈಸಿಲ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.