ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದವರ ವಿರುದ್ಧ ಗ್ರಾ.ಪಂ. ಕಾರ್ಯಚರಣೆ
ಪಡುಬಿದ್ರಿ ವರದಿ
ಗ್ರಾ.ಪಂ. ಎಚ್ಚರಿಕೆಯ ಹೊರತಾಗಿಯೂ ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರ ವಿರುದ್ಧ ಪಡುಬಿದ್ರಿ ಗ್ರಾ.ಪಂ. ಕಾರ್ಯಚರಣೆ ನಡೆಸಿ ತೆರವುಗೊಳಿಸಿ ಮುಂದೆ ತಪ್ಪು ಪುನರಾವರ್ತನೆ ಆದಲ್ಲಿ ದಂಡ ನೀಡ ಬೇಕಾದೀತು ಎಂಬುದಾಗಿ ಗ್ರಾ.ಪಂ. ಪಿಡಿಒ ಮಂಜುನಾಥ ಶೆಟ್ಟಿ ಎಚ್ಚರಿಸಿದ್ದಾರೆ..
ಮಳೆನೀರು ಹರಿದು ಹೋಗುವ ಡ್ರೈನೇಜ್ ಮೇಲ್ಭಾಗದಲ್ಲಿ ಸಾಮಾಗ್ರಿಗಳನ್ನಿಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ವಾಹನ ಸಂಚಾರಕ್ಕೆ ಅಡಚನೆಯಾಗುತ್ತಿದ್ದು, ಈ ಬಗ್ಗೆ ತಿಂಗಳ ಹಿಂದೆಯೆ ವ್ಯಾಪಾರಿಗಳಿಗೆ ಗ್ರಾ.ಪಂ. ಎಚ್ಚರಿಕೆ ನೀಡಿದ್ದರೂ, ಅದಕ್ಕೆ ಮಾನ್ಯತೆ ನೀಡದ ಕೆಲ ವ್ಯಾಪಾರಿಗಳು ಡ್ರೈನೇಜ್ ದಾಟಿ ರಸ್ತೆಗಂಟಿಕೊಂಡೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವಿಚಾರ ಗಮನಕ್ಕೆ ಬಂದು ಅಧ್ಯಕ್ಷರು ಹಾಗೂ ಸಿಬ್ಬಂದಿಗಳೊಂದಿಗೆ ತೆರಳಿ ಮತ್ತೆ ವ್ಯಾಪಾರ ಸಾಮಾಗ್ರಿಗಳನ್ನು ತೆರವುಗೊಳಿಸಲಾಗಿದೆ. ಮುಂದೆಯೂ ವ್ಯಾಪಾರಿಗಳು ತಮ್ಮ ಚಾಲಿಯನ್ನು ಮುಂದುವರಿಸಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದಲ್ಲಿ ಅಂಥಹ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂಬುದಾಗಿ ಪಿಡಿಓ ಮಂಜುನಾಥ ಶೆಟ್ಟಿ ಎಚ್ಚರಿಸಿದ್ದಾರೆ.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ಶಶಿಕಲ, ಕಾರ್ಯದರ್ಶಿ ರೂಪಲತಾ, ಗ್ರಾ.ಪಂ.ಸದಸ್ಯೆ ಮುಬೀನಾ ಸಹಿತ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.