ಡಿ.8ಕ್ಕೆ ಮುಂಡಾಲ ಸಮಾಜ ಭಾಂದವರಿಗಾಗಿ ವಿವಿಧ ಆಟೋಟ ಸ್ಪರ್ಧೆ
ಪಡುಬಿದ್ರಿ ವರದಿ
ಮುಂಡಾಲ ಯುವ ವೇದಿಕೆ ರಿ, ಪಡುಬಿದ್ರಿ ಇವರ ಆಶ್ರಯದಲ್ಲಿ ಉಡುಪಿ ಮಂಗಳೂರು ಅವಳಿ ಜಿಲ್ಲೆಗಳ ಸಮಾಜ ಭಾಂದವರಿಗಾಗಿ ಹಳೆಯ ಆಟೋಟ ಸ್ಪರ್ಧೆ ಗ್ರಾಮೀಣ ಕ್ರೀಡಾಕೂಟ ಡಿಸೆಂಬರ್ 8ರ ಭಾನುವಾರ ಪಡುಬಿದ್ರಿ ಬೋರ್ಡ್ ಶಾಲಾ ಮೈಧಾನದಲ್ಲಿ ನಡೆಯಲಿದೆ.
ಪ್ರಮುಖವಾಗಿ ಜಿಬಿಲಿ, ಕಲ್ಲಾಟ, ಟೊಂಕ, ಗೋಣಿದ ಬಲಿಪು ಇಂಥಹ ಹತ್ತಾರು ಗ್ರಾಮೀಣ ಆಟಗಳು ವೈಯಕ್ತಿಕ ವಿಭಾಗ ಹಾಗೂ ಗುಂಪು ಸ್ಪರ್ಧೆಗಳಾಗಿ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ನೀಡ ತಕ್ಕದ್ದು ಎಂಬುದಾಗಿ ಸಂಘಟಕರು ತಿಳಿಸಿದ್ದಾರೆ.
ಅದೇ ದಿನ ಸಂಜೆ ರಾಜ್ಯ ಪ್ರಶಸ್ತಿ ಪುರಸ್ಕೃತ ತಂಡ “ಕಲಾಕುಂಭ”
ಕುಲಾಯಿ ಮಂಗಳೂರು ಇವರಿಂದ “ತುಳುನಾಡ ಸಂಸ್ಕೃತಿ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಂಬುದಾಗಿ ಮುಂಡಾಲ ಯುವ ವೇದಿಕೆ ರಿ, ಪಡುಬಿದ್ರಿ ತಿಳಿಸಿದೆ.