ಡಿ.29ಕ್ಕೆ ಕಣ್ಣಂಗಾರು ಬ್ರಹ್ಮಬೈದರ್ಕಳ ವಾರ್ಷಿಕ ನೇಮೋತ್ಸವ
ಪಡುಬಿದ್ರಿ ವರದಿ
ಕಣ್ಣಂಗಾರು ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವು ಡಿ.29 ಕ್ಕೆ ನಿಯೋಜಿತ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.28ಕ್ಕೆ ನಾಗಬನದಲ್ಲಿ ತನುತಂಬಿಲ ಸೇವೆ, ರಾತ್ರಿ 7ಕ್ಕೆ ಅನ್ನ ನೈವೇದ್ಯ ಸೇವೆ(ಅಗೆಲು) ಗರೋಡಿ ಮನೆ ಕುಟುಂಬಿಕರಿಂದ, ಡಿ.29ಕ್ಕೆ ವಾರ್ಷಿಕ ನೇಮೋತ್ಸವದ ಸಲುವಾಗಿ ಮಧ್ಯಾಹ್ನ 12-30ರಿಂದ ಮಹಾ ಅನ್ನ ಸಂತರ್ಪಣೆ ಸೇವೆ, ಆಶಾ ಸಂದೀಪ್ ಮತ್ತು ಮಕ್ಕಳು, ಬಲ್ಯಾಯ ತೋಟ ಕಣ್ಣಂಗಾರು ಇವರಿಂದ, ಸಾಯಂಕಾಲ ಗಂಟೆ 7-30ಕ್ಕೆ ಕೋಟಿ-ಚೆನ್ನಯರು ಕೊಳಲ ಬಾಕಿಮಾರು ಪ್ರವೇಶ ಬಳಿಕ ಅನ್ನ ಸಂತರ್ಪಣೆ ಉಮೇಶ ಪೂಜಾರಿ ಮಲ್ಲಾರತೋಟ ಇವರಿಂದ. ರಾತ್ರಿ ಗಂಟೆ 11-30ಕ್ಕೆ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸ ಕಿನ್ಯಕ್ಕ ಬಳ್ಳಾಲರ ಆಗಮನ, ರಾತ್ರಿ 12-30ಕ್ಕೆ ಶ್ರೀಬ್ರಹ್ಮಬೈರ್ಕಳ ದರ್ಶನ, ಡಿ.30ರ ಬೆಳಿಗ್ಗೆ ಗಂಟೆ 9-30ಕ್ಕೆ ಮಾಯೆಂದಾಲ್ ದೇವಿಯ ನೇಮ ನಡೆಯಲಿದೆ ಎಂಬುದಾಗಿ ಗರೋಡಿಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.