ಡಿಸೆಂಬರ್23ಕ್ಕೆ ಕ್ರಿಸ್ಮಸ್ ಆಚರಣೆ
ಶಾಸಕ ಐವನ್ ಡಿಸೋಜ ಸಾರಥ್ಯ
ಮಂಗಳೂರು ವರದಿ
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತ್ರತ್ವದಲ್ಲಿ ಕಳೆದ ಒಂಭತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಕ್ರಿಸ್ಮಸ್ ಆಚರಣೆ ಈ ಬಾರಿ ದಶಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದ್ದು ಅದ್ಧೂರಿಯಾಗಿ ನಡೆಸಲು ಮುಂದಾಗಿದೆ.
ಡಿ.23ರ ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ತೊಕ್ಕೊಟ್ಟು ಸೀ ಬ್ಯಾಂವ್ಯಾಟ್ ಹಾಲ್ ಅದಮ್ ಕುದ್ರು, ನೇತ್ರಾವತಿ ಸೇತುವೆ ಸಮೀಪ ಇಲ್ಲಿ ನಡೆಯಲಿದೆ.
ಸರ್ವಧರ್ಮಗಳ ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಆಚರಿಸುವ ಮೂಲಕ ಮೆಚ್ಚುಗೆ ಗಳಿಸಿದ ಐವನ್ ಡಿಸೋಜ ಕಳೆದ ಹಿಂದುಗಳ ಹಬ್ಬವಾದ ದೀಪಾವಳಿಯನ್ನು ಸಾವಿರಾರು ಮಂದಿಗಳನ್ನು ಸೇರಿಸಿ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಶಿಷ್ಟ ಬಹುಮಾನಗಳನ್ನು ನೀಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದು ಇಲ್ಲಿ ಸ್ಮರಿಸ ಬಹುದಾಗಿದೆ.
ಈ ಕ್ರಿಸ್ಮಸ್ ಆಚರಣೆಯ ಮುಖ್ಯ ವೇದಿಕೆಯಲ್ಲಿ ಅಥಿತಿಗಳಾಗಿ ಡಾ.ಪೀಟರ್ ಪೌಲ್ ಸಾಲ್ದಾನ, ಫ್ರೋ. ಪಿ.ಎಲ್. ಧರ್ಮ, ಮೊಹಮ್ಮದ್ ಕುನ್ನಿ, ಇಕ್ಬಾಲ್ ಸಿಂಗ ರಾಥೋರ್, ಸಿಪ್ರೀಯನ್ ಪಿಂಟೋ ಮೊದಲಾದ ಗಣ್ಯರು ಪಾಲ್ಗೊಳ್ಳಲಿರುವರು ಈ ಕಾರ್ಯಕ್ರಮಕ್ಕೆ ಜಾತಿ ಭೇದ ಮರೆತು ಎಲ್ಲರೂ ಪಾಲ್ಗೊಳ್ಳುವಂತೆ ಪ್ರಕಟನೆ ತಿಳಿಸಿದೆ.