ಜೀವನದಲ್ಲಿ ಜಿಗುಪ್ಸೆ ವಯೋವೃದ್ಧ ಆತ್ಮಹತ್ಯೆಗೆ ಶರಣು
ಪಡುಬಿದ್ರಿ: ವಯೋವೃದ್ಧರೋವರು ಜೀವನದಲ್ಲಿ ಜಿಗುಪ್ಸೆಗೊಂಡು ಹೆಜಮಾಡಿಯಲ್ಲಿ ಶಾಂಭವಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ನಂದಳಿಕೆ ನಿವಾಸಿ ಜಯ ಎನ್ (72), ಇವರು ಮಂಗಳೂರಿನ ಕದ್ರಿ ಪಾರ್ಕಿನ ತನ್ನ ಮಗಳ ಮನೆಯಲ್ಲಿದ್ದು, ಇದಕ್ಕಿಂದಂತೆ ತನ್ನ ಮೊಬೈಲ್ ಸಹಿತ ಇತರ ಪರಿಕರಗಳನ್ನು ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದರು. ಈ ಬಗ್ಗೆ ಕದ್ರಿ ಠಾಣೆಗೆ ದೂರು ಕೂಡಾ ನೀಡಿದ್ದರು. ಇದೀಗ ನಾಪತ್ತೆಯಾದವರ ಮೃತ ದೇಹ ನಡಿಕುದ್ರುವಿನ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.