ಜಾತಿ ಮತ ಭೇದ ಮರೆತು ಆಚರಿಸುವ ಹಬ್ಬ ಹೆಜಮಾಡಿ ಜುಮ್ಮಾ ಮಸೀದಿಯ ಉರೂಸ್ ಸಮಾರಂಭ
ಪಡುಬಿದ್ರಿ ವರದಿ
ಕನ್ನಂಗಾರಿನ ಇತಿಹಾಸ ಪ್ರಸಿದ್ದ ಜುಮ್ಮಾ ಮಸೀದಿಯ ವಾರ್ಷಿಕ ಉರೂಸ್ ಸಮಾರಂಭ ಇದೇ ಬರುವ ಎಪ್ರಿಲ್ ಹನ್ನೊಂದರಿಂದ ಹತ್ತೊಂಭತ್ತರ ವರಗೆ ಉದ್ಯಮಿ ಗುಲಾಂ ಹಾಜಿ ಮೊಹಮ್ಮದ್ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂಬುದಾಗಿ ಮಸೀಯ ಧರ್ಮಗುರು ಅಶ್ರಫ್ ಸಖಾಫಿ ಹೇಳಿದ್ದಾರೆ.
ಅವರು ಮಸೀದಿಯಲ್ಲಿ ಉರೂಸಿನ ಕರಪತ್ರ ಬಿಡುಗಡೆ ಗೊಳಿಸಿ ಮಾತನಾಡಿದರು. ಎಲ್ಲಾ ಜಾತಿ ಧರ್ಮಗಳ ನಂಬಿಕೆಯ ಹಾಗೂ ಭಕ್ತಿಯ ಕ್ಷೇತ್ರ ಈ ಕನ್ನಂಗಾರು ಜುಮ್ಮಾ ಮಸೀದಿ, ಜಾತ ಧರ್ಮ ಮತ ಮರೆತು ಉರೂಸ್ ಸಂದರ್ಭ ಎಲ್ಲರೂ ಈ ಕ್ಷೇತ್ರದ ಉತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ ಎಂದರು.
ಈ ಸಂದರ್ಭ ಉರೂಸ್ ಸಮಿತಿಯ ಅಧ್ಯಕ್ಷ ಹಾಜಿ ಗುಲಾಂ ಮೊಹಮ್ಮದ್, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಮೀದ್ ಹಾಜಿ, ಎಂ.ಪಿ. ಬಾವ ತಲವಾರು ತೋಟ, ಉರೂಸ್ ಸಮಿತಿ ಉಪಾಧ್ಯಕ್ಷ ಹನೀಫ್, ಜಮಾತ್ ಸಮಿತಿ ಹಾಗೂ ಉರೂಸ್ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.